×
Ad

ಶರತ್ ಮಡಿವಾಳ ಸಾವಿನ ಘೋಷಣೆಯಲ್ಲಿ ಗೊಂದಲ: ಸುರೇಶ್ ಕಣೆಮರಡ್ಕ ಆರೋಪ

Update: 2017-07-12 21:08 IST

ಬಂಟ್ವಾಳ, ಜು. 12: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಜುಲೈ 6ರಂದು ರಾತ್ರಿ 12:30ರ ವೇಳೆ ಮೃತಪಟ್ಟಿದ್ದರೂ ಅವರ ಸಾವಿನ ಘೋಷಣೆಯನ್ನು ಜುಲೈ 7ರಂದು ರಾತ್ರಿ ಮಾಡಲಾಗಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಶ್ ಕಣೆಮರಡ್ಕ ಆರೋಪಿಸಿದ್ದಾರೆ.

ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಮುಖ್ಯಮಂತ್ರಿಯ ರಾಜಕೀಯ ಸಭೆಗೋಸ್ಕರ ಶರತ್ ಮೃತಪಟ್ಟರೂ ಅದನ್ನು ಅವರ ತಂದೆತಾಯಿಗೆ ತಿಳಿಸಿರಲಿಲ್ಲ.

ಸಿದ್ಧರಾಮಯ್ಯರವರ ರಾಜಕೀಯ ಕಾರ್ಯಕ್ರಮ ಯಶಸ್ಸಿಗೆ ಶರತ್ ಸಾವಿನ ಘೋಷಣೆಯನ್ನೂ ವಿಳಂಬಿಸಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಜಿಲ್ಲಾಡಳಿತ ಶಾಂತಿ ಸಭೆಯನ್ನು ಕರೆದಿದ್ದು ಅದನ್ನು ಬಿಜೆಪಿ ಬಹಿಷ್ಕರಿಸುತ್ತದೆ. ನಿರಪರಾಧಿಗಳ ಮೇಲೆ ಕೇಸುಗಳನ್ನು ಹಾಕಿ ಶಾಂತಿಸಭೆ ಮಾಡಿಸುವುದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದರು.

ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಕ್ಷೇತ್ರ ಅಧ್ಯಕ್ಷ ಸಾಂತಪ್ಪ ಪೂಜಾರಿ, ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ ಅಣ್ಣಳಿಕೆ, ಉಪಾಧ್ಯಕ್ಷ ಸೋಮಪ್ಪ ಕೋಟ್ಯಾನ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News