ಶೋಭಾ ಕರಂದ್ಲಾಜೆ ರಾಜೀನಾಮೆಗೆ ಶ್ಯಾಮಲಾ ಭಂಡಾರಿ ಆಗ್ರಹ
Update: 2017-07-12 21:43 IST
ಕುಂದಾಪುರ, ಜು.12: ಸಂವಿಧಾನದ ರಕ್ಷಣೆಯಂತಹ ಜವಾಬ್ದಾರಿಯುತ ಹುದ್ದೆಯ ಸಂಸದೆಯಾಗಿದ್ದು, ಶೋಭಾ ಕರಂದ್ಲಾಜೆ ಕೋಮು ಸಾಮರಸ್ಯ ಕೆಡುವಂತಹ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿ ಗಲಭೆ ಪೀಡಿತ ಪ್ರದೇಶದಲ್ಲಿ ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿ ಕಟ್ಟುತ್ತಿರುವುದು ಖಂಡನೀಯ ಎಂದು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಶ್ಯಾಮಲಾ ಭಂಡಾರಿ ಹೇಳಿದ್ದಾರೆ.
ಶೋಭಾ ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದ್ದಾರೆ. ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರು ಇರುವಂತೆ, ಕೆಟ್ಟವರೂ ಇದ್ದಾರೆ. ಯಾರೋ ಬೆರೆಳೆಣಿಕೆಯ ಕಿಡಿಗೇಡಿಗಳು ಎಸಗುವ ದುಷ್ಕೃತ್ಯಗಳಿಗೋಸ್ಕರ ಇಡೀ ಒಂದು ಸಮುದಾಯವನ್ನೇ ದೂಷಿಸುವುದು ಸರಿಯಲ್ಲ. ದೇಶದ ಸಂವಿಧಾನದ ಪ್ರಕಾರ ಯಾರೇ ತಪ್ಪು ಮಾಡಿದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.