×
Ad

ಹಿಜ್ಬುಲ್ ಮುಜಾಹಿದ್ದೀನ್‌ಗೆ ಪಾಕಿಸ್ತಾನ ಬೆಂಬಲ

Update: 2017-07-12 22:39 IST

ಹೊಸದಿಲ್ಲಿ, ಜು.12: ಕಾಶ್ಮೀರದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಸಿ ಭಯೋತ್ಪಾದಕ ದಾಳಿ ನಡೆಸಲು ಪಾಕಿಸ್ತಾನ ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್‌ನೊಂದಿಗೆ ಕೈಜೋಡಿಸಿದೆ ಎಂದು ಧ್ವನಿ ಮುದ್ರಿಕೆಯನ್ನು ಭದ್ರತಾ ಸಂಸ್ಥೆ ಬಹಿರಂಗಗೊಳಿಸಿದೆ.

ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಗಳಿಗೆ ಹೇಗೆ ದುಷ್ಪ್ರೇರಣೆ ಹಾಗೂ ನೆರವು ನೀಡುತ್ತಿದೆ ಎಂಬುದಕ್ಕೆ ಇದು ಉತ್ತಮ ಪುರಾವೆ. ಇದರ ಲಿಪ್ಯಂತರದ ಮಾಹಿತಿಯನ್ನು ನಿರಾಕರಿಸಲು ಸಾಧ್ಯವಿಲ್ಲ. ಕಳೆದ ಕೆಲವು ತಿಂಗಳಿಂದ ಸೇನಾ ಕಾಯಾಚರಣೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಸುಮಾರು 90 ಸದಸ್ಯರನ್ನು ಕಳೆದುಕೊಂಡಿದೆ. ತೀವ್ರ ಹತಾಶೆಗೆ ಒಳಗಾದ ಹಿನ್ನೆಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸೇನಾ ನೆಲೆಗಳ ಮೇಲೆ ರಾಸಾಯನಿಕ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಅದು ಹೇಳಿದೆ.

ಈ ಲಿಪ್ಯಂದತರದ ಪ್ರಕಾರ ಹಿಜ್ಬುಲ್ ಸದಸ್ಯರು ಈಗಾಗಲೇ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಈ ಶಸ್ತ್ರಾಸ್ತ್ರಗಳನ್ನು ಬಳಸಲು ಯೋಜನೆ ರೂಪಿಸು ತ್ತಿದ್ದಾರೆ. ಮತ್ತೆ ಮತ್ತೆ ವಿಜಯ ಸಾಧಿಸಿರುವ ಭದ್ರತಾ ಪಡೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದು ಇದರ ಮೊದಲ ಉದ್ದೇಶ.

ಪೀಯರ್ ಸಾಬ್‌ಗೆ ನಾನು ಬೇಕಾಗಿದೆ, ಆದರೆ, ನನ್ನ ಜನರು ನಾನು ಹಿಂದೆ ಬರಲು ಬಯಸುತ್ತಿದ್ದಾರೆ. ಈದ್‌ನ ಬಳಿಕ ನಮ್ಮ ಮುಂದಿನ ಕಾರ್ಯಕ್ರಮ. ಈದ್‌ನ ನಂತರ ನಮ್ಮ ಮುಂದಿನ ನಡೆಯ ಬಗ್ಗೆ ಯೋಜನೆ ರೂಪಿಸಲಿದ್ದೇವೆ ಎಂದು ಟಿ.ವಿ ವಾಹಿನಿಯೊಂದಿಗೆ ದೊರಕಿದ ಲಿಪ್ಯಂತರದಿಂದ ತಿಳಿದುಬಂದಿದೆ.

ಇದುವರೆಗ ಹಿಜ್ಬುಲ್ ಮುಜಾಹಿದ್ದೀನ್ ಸದಸ್ಯರು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರು. ಈಗ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿದಾಗ ಭಾರತೀಯ ಸೇನಾ ಪಡೆಗೆ ಆಘಾತ ಉಂಟಾಗಬಹುದು ಎಂಬುದು ಅವರ ನಂಬಿಕೆ. ನಾವು ಪಾಕಿಸ್ತಾನದಿಂದ ಸಾಕಷ್ಟು ಬೆಂಬಲ ಪಡೆಯಲಿದ್ದೇವೆ. ಕಾಲ ಬಂದಾಗ ಪಾಕಿಸ್ತಾನ ಭಾರತದ ವಿರುದ್ಧದ ಆಟದಲ್ಲಿ ಹೆಜ್ಜೆ ಇರಿಸಲಿದೆ ಎಂದು ಈ ಧ್ವನಿ ಸುರುಳಿಯ ಲಿಪ್ಯಂತರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News