ಕಾರ್ಕಳ ಜನಸ್ಪಂದನ: 516 ಫಲಾನುಭವಿಗಳಿಗೆ ಸವಲತ್ತು ವಿತರಣೆ

Update: 2017-07-13 15:10 GMT

ಕಾರ್ಕಳ, ಜು.13: ಜನರ ಸಮಸ್ಯೆಗಳನ್ನು ಸ್ಥಳದಲ್ಲಿ ಆಲಿಸಿ, ಪರಿಹರಿಸುವ ಉದ್ದೇಶದಿಂದ ಆರಂಭಿಸಲಾದ ಜನಸ್ಪಂದನ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಗುರುವಾರ ಕಾರ್ಕಳದಲ್ಲಿ ನಡೆದ ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜನಸ್ಪಂದನದಲ್ಲಿ ಜನರ ಅಹವಾಲು ಆಲಿಸಿ ಪರಿಹಾರ ಕಲ್ಪಿಸುವ ಜೊತೆಗೆ ಫಲಾನುಭವಿಗಳಿಗೆ ಸ್ಥಳದಲ್ಲೇ ಸವಲತ್ತು ಗಳನ್ನು ಸಹ ನೀಡಲಾಗುತ್ತಿದೆ. ನಮ್ಮ ಸರಕಾರ ನುಡಿದಂತೆ ನಡೆಯುತ್ತಿದ್ದು ಕಾರ್ಕಳದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದೆ ಎಂದವರು ನುಡಿದರು.

ಗುರುವಾರ ಕಾರ್ಕಳದಲ್ಲಿ ನಡೆದ ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನುಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜನಸ್ಪಂದನದಲ್ಲಿ ಜನರ ಅಹವಾಲು ಆಲಿಸಿ ಪರಿಹಾರ ಕಲ್ಪಿಸುವ ಜೊತೆಗೆ ಫಲಾನುವಿಗಳಿಗೆ ಸ್ಥಳದಲ್ಲೇ ಸವಲತ್ತು ಗಳನ್ನು ಸಹ ನೀಡಲಾಗುತ್ತಿದೆ. ನಮ್ಮ ಸರಕಾರ ನುಡಿದಂತೆ ನಡೆಯುತ್ತಿದ್ದು ಕಾರ್ಕಳದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದೆ ಎಂದವರು ನುಡಿದರು.

ಅನ್ನಭಾಗ್ಯದಂತಹ ಯೋಜನೆ ಬಡವರ ಹೊಟ್ಟೆಯನ್ನು ತುಂಬಿಸಿದೆ. ಕ್ಷೀರಧಾರೆ ಯಂತಹ ಯೋಜನೆಗಳಿಂದ ಮಹಿಳೆಯರು ಮನೆಯನ್ನು ಬೆಳಗುತ್ತಿದ್ದಾರೆ. ಕ್ಷೀರಭಾಗ್ಯದಿಂದ ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಯಾಗಿದೆ. ಸರಕಾರದ ಭಾಗ್ಯ ಯೋಜನೆಗಳಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಿರೀಕ್ಷೆಗೂ ಮೀರಿ ಪ್ರಯೋಜನವಾಗಿದೆ ಎಂದು ಸಚಿವರು ತಿಳಿಸಿದರು.

ಕಾರ್ಕಳದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 29,361 ಬಿಪಿಎಲ್ ಕಾರ್ಡ್, 4217ಅಂತ್ಯೋದಯ ಕಾರ್ಡ್‌ಗಳನ್ನು ನೀಡಲಾಗಿದ್ದು, 94ಸಿ ಮತ್ತು 94ಸಿಸಿಯಡಿ ಅರ್ಹ ಫಲಾನುಭವಿಗಳಿಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಟಿಸಿ ವಿತರಣೆ ನಡೆದಿದೆ. ತಾಲೂಕಿನ ಶೇ.90ರಷ್ಟು ಜನರು ಸರಕಾರದ ನೆರವನ್ನು ಪಡೆದರು ಎಂದು ಪ್ರಮೋದ್ ಹೇಳಿದರು.

ಅಕ್ರಮ ಸಕ್ರಮ ಬೈಠಕ್‌ಗಳಿಂದ ಮನೆಯ ಒಡೆತನ ಬಡವರಿಗೆ ಲಭಿಸಿದ್ದು, ಇಂದು ಕೊರಗ ಸಮುದಾಯದವರಿಗೆ ಹೋಬಳಿ ವ್ಯಾಪ್ತಿಯಲ್ಲಿ 11 ಕುಟುಂಬ, ಪುರಸಭಾ ವ್ಯಾಪ್ತಿಯಲ್ಲಿ 35 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಒಟ್ಟು 242 ಹಕ್ಕುಪತ್ರಗಳನ್ನು ಇಂದು ನೀಡಲಾಗಿದೆ. ಕಾರ್ಕಳ ಪ್ರದೇಶ ವ್ಯಾಪ್ತಿಯ ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರಕ್ಕೂ ಪ್ರಕ್ರಿಯೆಗಳು ನಡೆಯುತ್ತಿದ್ದು, ಹಂತ ಹಂತವಾಗಿ ಜನರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಮಾತನಾಡಿ, ಜನರ ಸಮಸ್ಯೆ ಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಜನಸ್ಪಂದನ ಜನೋಪಕಾರಿಯಾಗಿದೆ. ತಾಲೂಕಿನ ಎಲ್ಲಾ ಗ್ರಾಪಂ ಮಟ್ಟದಲ್ಲಿ ಅಕ್ರಮ-ಸಕ್ರಮ ಬೈಠಕ್ ನಡೆಸಿ ಸುಮಾರು 8,000 ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಕಾರ್ಕಳದ ಜನರಿಗೆ ಸರಕಾರದಿಂದ ದೊರಕುವ ಎಲ್ಲಾ ಪ್ರಯೋಜನಗಳನ್ನು ಕೊಡಿಸಲಾಗಿದೆ. ಸರಕಾರದ ಅನುದಾನ ಸದ್ಬಳಕೆಯಾಗಿದೆ ಎಂದರು.

ಇಂದಿನ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 10 ಮಕ್ಕಳಿಗೆ ಸಮವಸ್ತ್ರ ವಿತರಣೆ ವಾಡಲಾಯಿತು. ಆರೋಗ್ಯ ಇಲಾಖೆಯಿಂದ ಮಡಿಲು ಕಿಟ್ ವಿತರಿಸಲಾಯಿತು. ಕೃಷಿ ಇಲಾಖೆಯಿಂದ ಕೃಷಿ ಯಂತ್ರೋಪಕರಣ, ತೋಟ ಗಾರಿಕಾ ಇಲಾಖೆಯಿಂದ ಸಸಿಗಳನ್ನು ನೀಡಲಾಯಿತು. ಪಿಂಚಣಿ ಯೋಜನೆ ಯಡಿ ಹಲವರಿಗೆ ಸಲತ್ತು ನೀಡಲಾಯಿತು.

ಇಂದಿನ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 10 ಮಕ್ಕಳಿಗೆ ಸಮವಸ್ತ್ರ ವಿತರಣೆ ವಾಡಲಾಯಿತು. ಆರೋಗ್ಯ ಇಲಾಖೆಯಿಂದ ಮಡಿಲು ಕಿಟ್ ವಿತರಿಸಲಾಯಿತು. ಕೃಷಿ ಇಲಾಖೆಯಿಂದ ಕೃಷಿ ಯಂತ್ರೋಪಕರಣ, ತೋಟ ಗಾರಿಕಾ ಇಲಾಖೆಯಿಂದ ಸಸಿಗಳನ್ನು ನೀಡಲಾಯಿತು. ಪಿಂಚಣಿ ಯೋಜನೆ ಯಡಿ ಹಲವರಿಗೆ ಸವಲತ್ತು ನೀಡಲಾಯಿತು. ಇದೇ ವೇಳೆ ಜನರಿಂದ ಒಟ್ಟು 18 ಅಹವಾಲುಗಳನ್ನು ಸ್ವೀಕರಿಸಲಾಗಿದ್ದು, ಮೆಸ್ಕಾಂ ಮತ್ತು ಪುರಸಭೆ ವಿರುದ್ಧ, ಕಾರ್ಕಳ ನೂತನ ಸರಕಾರಿ ಆಸ್ಪತ್ರೆ ಸೋರುವ ಬಗ್ಗೆ ನಾಗರಿಕರಿಂದ ದೂರುಗಳಿದ್ದವು.ಮೆಸ್ಕಾಂ ಬೆಳ್ಮಣ್ ವಿಭಾಗದ ಸಮಸ್ಯೆಯನ್ನು ಒಂದು ವಾರದೊಳಗೆ ಪರಿಹರಿಸಿ ವರದಿ ನೀಡಲು ಸ್ಥಳದಲ್ಲಿದ್ದ ಅಧಿಕಾರಿಗೆ ಸಚಿವರು ತಿಳಿಸಿದರು.

ಇದೇ ವೇಳೆ ಜನರಿಂದ ಒಟ್ಟು 18 ಅಹವಾಲುಗಳನ್ನು ಸ್ವೀಕರಿಸಲಾಗಿದ್ದು, ಮೆಸ್ಕಾಂ ಮತ್ತು ಪುರಸೆಭೆ ವಿರುದ್ಧ, ಕಾರ್ಕಳ ನೂತನ ಸರಕಾರಿ ಆಸ್ಪತ್ರೆ ಸೋರುವ ಬಗ್ಗೆ ನಾಗರಿಕರಿಂದ ದೂರು ಗಳಿದ್ದವು. ಮೆಸ್ಕಾಂ ಬೆಳ್ಮಣ್‌ ವಿಭಾಗದ ಸಮಸ್ಯೆಯನ್ನು ಒಂದು ವಾರದೊಳಗೆ ಪರಿಹರಿಸಿ ವರದಿ ನೀಡಲು ಸ್ಥಳದಲ್ಲಿದ್ದ ಅಧಿಕಾರಿಗೆ ಸಚಿವರು ತಿಳಿಸಿದರು. ಅಂಬೇಡ್ಕರ್ ಭವನ ನಿರ್ಮಾಣ, ಮರಾಠಿ ಸಮುದಾಯಕ್ಕೊಂದು ಭವನ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತ ವಿಳಂಬ ದೂರುಗಳನ್ನು ಪರಿಹರಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್, ತಾಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಗಿರಿಧರ್ ನಾಯಕ್, ಜಿಪಂ ಸದಸ್ಯರಾದ ರೇಷ್ಮಾ ಉದಯ್ ಶೆಟ್ಟಿ ಉಪಸ್ಥಿತರಿದ್ದರು.

ತಹಶೀಲ್ದಾರ್ ಗುರುಪ್ರಸಾದ್ ಸ್ವಾಗತಿಸಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News