ಅಲ್ಪಸಂಖ್ಯಾತರ ಸಮುದಾಯದ ಯುವಕ/ಯುವತಿಯರಿಗೆ ತರಬೇತಿ

Update: 2017-07-13 16:25 GMT

ಉಡುಪಿ, ಜು.13: ಅಲ್ಪಸಂಖ್ಯಾತರ ಸಮುದಾಯದ ಯುವಕ/ಯುವತಿಯರಿಗೆ ಮೇಸರ್ಸ್ ಎಸಿಸಿಪಿಎಲ್ ಸಂಸ್ಥೆ ವತಿಯಿಂದ 2017-18ನೇ ಸಾಲಿನಲ್ಲಿ ಕಂಪ್ಯೂಟರ್ ನೆಟ್‌ವರ್ಕ್ ಅಸಿಸ್ಟೆಂಟ್ ಹಾಗೂ ಸೋಲಾರ್ ಹಾಟ್‌ ವಾಟರ್ ಸಿಸ್ಟಮ್ ಇನ್‌ಸ್ಟಲೇಶನ್ ಕೋರ್ಸುಗಳಲ್ಲಿ ಕುಂದಾಪುರದ ಎಸಿಸಿಪಿಎಲ್ ಟ್ರೈನಿಂಗ್ ಡಿವಿಜನ್, ಕೇರಾಪ್ ಸೃಪ್ಠಿ ಇನ್ಫೋಟೆಕ್, ರಾಜಲಕ್ಷ್ಮಿ ಕಾಂಪ್ಲೆಕ್ಸ್, ಚರ್ಚ್ ರಸ್ತೆ ಕುಂದಾಪುರ ಇಲ್ಲಿ ಉಚಿತ ತರಬೇತಿ ಪಡೆಯಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದಕ್ಕಾಗಿ ಆಸಕ್ತ ಎಸೆಸೆಲ್ಸಿ ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿ 18ರಿಂದ 35 ವರ್ಷ ದೊಳಗಿರಬೇಕು. ಜು.24 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ‘ಬಿ’ ಬ್ಲಾಕ್, 2ನೇ ಮಹಡಿ, ರಜತಾದ್ರಿ, ಮಣಿಪಾಲ (ದೂರವಾಣಿ:0820-2574881) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News