×
Ad

ನಾಪತ್ತೆಯಾಗಿದ್ದ ಬಾಲಕ ಮನೆಯವರ ವಶಕ್ಕೆ

Update: 2017-07-13 22:35 IST

ಬೆಳ್ತಂಗಡಿ, ಜು.13: ಕುಣಿಗಲ್ ಠಾಣಾ ವ್ಯಾಪ್ತಿಯ ನಾಗೇಂದ್ರ ಪ್ರಸಾದ್(14) ಎಂಬಾತ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಈತನನ್ನು ಧರ್ಮಸ್ಥಳ ಪೋಲಿಸರು ಪತ್ತೆ ಹಚ್ಚಿ ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ. ಧರ್ಮಸ್ಥಳದ ವಾಹನ ನಿಲುಗಡೆ ಪ್ರದೇಶದಲ್ಲಿ ಇದ್ದ ಈತನನ್ನು ಎಸ್‌ಐ ರಾಮ ನಾಯ್ಕಾ, ಸಿಬ್ಬಂದಿ ರವೀಂದ್ರ ಅವರು ಪತ್ತೆ ಹಚ್ಚಿ ವಿಚಾರಿಸಿದಾಗ ಮಾಹಿತಿ ನೀಡಿದ್ದಾರೆ. ಈತನ ಮಾಹಿತಿಯಂತೆ ಕುಣಿಗಲ್ ಪೋಲಿಸ್ ಠಾಣೆಯನ್ನು ಸಂಪರ್ಕಿಸಿದ ಧರ್ಮಸ್ಥಳ ಪೋಲಿಸರು ಈತನನ್ನು ಮನೆಯವರ ವಶಕ್ಕೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News