×
Ad

ಪಾಕ್‌ಗೆ ಸೇನಾ ನೆರವಿನ ಮೇಲೆ ಅಮೆರಿಕ ಕಠಿಣ ಶರತ್ತು

Update: 2017-07-13 22:37 IST

ವಾಶಿಂಗ್ಟನ್, ಜು. 13: ಅಮೆರಿಕ ಪಾಕಿಸ್ತಾನಕ್ಕೆ ನೀಡುವ ನಾಗರಿಕ ಮತ್ತು ಸೇನಾ ನೆರವಿಗೆ ಕಠಿಣ ಶರತ್ತುಗಳನ್ನು ವಿಧಿಸುವ ಪ್ರಸ್ತಾಪವೊಂದವನ್ನು ಅಮೆರಿಕದ ಹೌಸ್ ಅಪ್ರೋಪ್ರಿಯೇಶನ್ಸ್ ಸಮಿತಿ ಪರಿಶೀಲಿಸಲಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಸ್ಲಾಮಾಬಾದ್ ತೃಪ್ತಿದಾಯಕ ಪ್ರಗತಿ ತೋರಿಸಿದರೆ ಮಾತ್ರ ಅದಕ್ಕೆ ಈ ನೆರವು ಲಭಿಸುತ್ತದೆ ಎಂಬ ಶರತ್ತನ್ನು ಈ ಪ್ರಸ್ತಾಪ ಹೊಂದಿದೆ ಎನ್ನಲಾಗಿದೆ.

2018ರ ಸರಕಾರಿ ಮತ್ತು ವಿದೇಶಿ ಕಾರ್ಯಾಚರಣೆಗಳ ಕರಡು ಮಸೂದೆಯು ಈ ಕಠಿಣ ಶರತ್ತುಗಳನ್ನು ಹೊಂದಿದೆ.

ಈ ಮಸೂದೆಯು ನಿಗದಿತ ವಿವೇಚನಾ ನಿಧಿ ಮತ್ತು ವಿದೇಶಿ ತುರ್ತು ಕಾರ್ಯಾಚರಣೆ (ಒಸಿಒ) ನಿಧಿಗೆ 47.4 ಬಿಲಿಯ ಡಾಲರ್ (3,05,493 ಕೋಟಿ ರೂಪಾಯಿ) ಒದಗಿಸುತ್ತದೆ.

ಇದು 2017ರಲ್ಲಿ ಒದಗಿಸಲಾದ ಮೊತ್ತಕ್ಕಿಂತ 10 ಬಿಲಿಯ ಡಾಲರ್ (64,450 ಕೋಟಿ ರೂಪಾಯಿ) ಯಷ್ಟು ಕಡಿಮೆಯಾಗಿದೆ.

ಇದರಲ್ಲಿ 12 ಬಿಲಿಯ ಡಾಲರ್ (77,340 ಕೋಟಿ ರೂಪಾಯಿ) ಒಸಿಒ ನಿಧಿಯಾಗಿದೆ. ಇರಾಕ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮುಂತಾದ ಸಂಘರ್ಷಪೀಡಿತ ದೇಶಗಳಲ್ಲಿ ನಡೆಯುವ ಸೇನಾ ಕಾರ್ಯಾಚರಣೆ ಮತ್ತು ಪರಿಹಾರ ಕಾರ್ಯಗಳಿಗೆ ಈ ಮೊತ್ತವನ್ನು ಬಳಸಿಕೊಳ್ಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News