ಸನ್ನೀ ಮಹಲ್ ಮಂಚಿ: ಮಂಚಿ ಉಸ್ತಾದ್, ಎಣ್ಮೂರು ಲತೀಫಿ ಆಯ್ಕೆ
ಮಂಗಳೂರು, ಜು. 13: ಮಂಚಿ ಕೊಳ್ನಾಡುವಿನಲ್ಲಿ ಇತ್ತೀಚೆಗೆ ಶೈಖುನಾ ಇಬ್ರಾಹೀಂ ಮದನಿ ಮಂಚಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುನ್ನೀ ಮಹಲ್ ಸಮಿತಿ ರಚಿಸಲಾಯಿತು.
ಸುನ್ನೀ ಮಹಲ್‌ನ ಸ್ಥಾಪಕ ಸಿ.ಎಂ.ಅಬೂಬಕರ್ ಲತೀಫಿ ಎಣ್ಮೂರು ಸಭೆಯನ್ನು ಉದ್ಘಾಟಿಸಿದರು. ಬದ್ರುದ್ದೀನ್ ಹಾಜಿ ಕುಕ್ಕಾಜೆ, ಟಿ.ಕೆ.ಇಸ್ಮಾಯೀಲ್ ಸಅದಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಮಿತಿಗೆ ನಿರ್ದೇಶಕರಾಗಿ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಕೂರತ್, ಸಯ್ಯಿದ್ ಖಾಸಿಂ ತಂಙಳ್ ಸಾಲೆತ್ತೂರು, ಅಧ್ಯಕ್ಷರಾಗಿ ಶೈಖುನಾ ಇಬ್ರಾಹೀಂ ಮದನಿ ಮಂಚಿ, ಉಪಾಧ್ಯಕ್ಷರಾಗಿ ನಿಸಾರ್ ಹಾಜಿ ಈಶ್ವರಮಂಗಲ, ಟಿ.ಕೆ.ಇಸ್ಮಾಯೀಲ್ ಸಅದಿ, ಬುದ್ರುದ್ದೀನ್ ಕಯ್ಯೂರು, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಂ.ಅಬೂಬಕರ್ ಲತೀಫಿ ಎಣ್ಮೂರು, ಕಾರ್ಯದರ್ಶಿಗಳಾಗಿ ಅಬ್ದುರ್ರಝಾಕ್ ಖಂಡಿಗ, ಎ.ಎಂ.ರಫೀಕ್ ಝುಹ್ರಿ, ಸಂಘಟಕರಾಗಿ ಬದ್ರುದ್ದೀನ್ ಹಾಜಿ ಕುಕ್ಕಾಜೆ, ಮಾಧ್ಯಮ ಕಾರ್ಯದರ್ಶಿಯಾಗಿ ಬಿ.ಇಬ್ರಾಹೀಂ ಖಲೀಲ್ ಮುಸ್ಲಿಯಾರ್, ಕೋಶಾಧಿಕಾರಿಯಾಗಿ ಮುಹಮ್ಮದ್ ಹಾಜಿ ಮೋಂತಿಮಾರ್ ಅವರನ್ನು ಆಯ್ಕೆ ಮಾಡಲಾಯಿತು.ಬಿ.ಇಬ್ರಾಹೀಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.