ಕಾರ್ಕಳದ ಸಮಸ್ಯೆಗಳಿಗೆ ಧ್ವನಿಯಾಗಲು ಸಿದ್ದರಾಮಯ್ಯ ಸೂಚನೆ- ಜನಸ್ಪಂದನ ಸಭೆಯಲ್ಲಿ ಪ್ರಮೋದ್ ಮಧ್ವರಾಜ್ ಹೇಳಿಕೆ
ಕಾರ್ಕಳ, ಜು. 13: ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಆಡಳಿತದಲ್ಲಿ 94ಸಿ ಮತ್ತು 94ಸಿಸಿ ಮೂಲಕ ಜನರಿಗೆ ಶಾಶ್ವತ ನೆಲೆಯನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಸಿದ್ಧರಾಮಯ್ಯನವರ ಆದೇಶದಂತೆ ಉಡುಪಿ ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಕಾರ್ಕಳ ತಾಲೂಕಿನ ಜನರ ಸಮಸ್ಯೆಗಳಿಗೆ ವಿಶೇಷವಾಗಿ ಸ್ಪಂಸುವಂತೆ ಸೂಚಿಸಿದ್ದಾರೆ. ಅದರಂತೆ ಕ್ಷೇತ್ರ ಶಾಸಕರ ಜೊತೆಗೆ ನಾನು ಕೂಡಾ ನಿಮ್ಮ ಸೇವೆಗೆ ಬದ್ಧನಾಗಿದ್ದೇನೆ ಎಂದು ರಾಜ್ಯ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಅವರು ಗುರುವಾರ ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ ಕಾರ್ಕಳ ಹೋಬಳಿಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಪಕ್ಷಗಳ ಶಾಸಕರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ನಿರ್ಣಯಿಸಿದಂತೆ 94ಸಿ ಮತ್ತು 94ಸಿಸಿ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಡಿ ನೋಟಿಸ್ ನೀಡುವ ಕೆಲಸ ಮಾಡುತ್ತಿದ್ದೇವೆ. ಭೂಮಿಯಿಲ್ಲದವರಿಗೆ ಹಾಗೂ ಬಾಡಿಗೆ ಮನೆಯಲ್ಲಿ ಇರುವವರಿಗೆ ಮುಂದಿನ ದಿನಗಳಲ್ಲಿ ನಿವೇಶನ ಕೊಡುವ ಕೆಲಸ ನಡೆಯಲಿದೆ. ಜನರ ಸೇವೆಗಾಗಿ ನಮ್ಮ ಕಾಂಗ್ರೆಸ್ ಸರಕಾರ ಸದಾ ಸಿದ್ಧವಾಗಿದೆ ಎಂದರು.
ಬಿಪಿಎಲ್ ಪಡಿತರ ಕಾರ್ಡ್ ಬಡವರ ಮನೆಯ ಭಾಗ್ಯಲಕ್ಷೀತ್ಮ ಇದ್ದಂತೆ. ರಾಜ್ಯದಲ್ಲಿ ನಮ್ಮ ಸರಕಾರ ಅಕಾರಕ್ಕೆ ಬಂದ ಬಿಪಿಎಲ್ ಪಡಿತರ ಕಾರ್ಡ್ ವಿತರಣೆಗೆ ಹೆಚ್ಚಿನ ಒತ್ತು ನೀಡಿ, ಅನ್ನ ಭಾಗ್ಯ ಯೋಜನೆಯ ಮೂಲಕ ಹಸಿವು ಮುಕ್ತ ರಾಜ್ಯವನ್ನಾಗಿಸಿವೆ ಎಂದರು. ಬಡ ಜನತೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ನಮ್ಮ ಸರಕಾರವು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕರ್ನಾಟಕದ ಇತಿಹಾಸದಲ್ಲೇ ಅಷ್ಟೊಂದು ದೊಡ್ಡ ಪ್ರಮಾಣದ ಜನಪ್ರಿಯ ಕಾರ್ಯಕ್ರಮ ನೀಡಿದ ಇತಿಹಾಸ ಸಿಎಂ ಸಿದ್ದರಾಮಯ್ಯ ಅವರ ಸರಕಾರದಿಂದ ಸಾಧ್ಯವಾಗಿದೆ. ಹಾಲಿನ ಸಬ್ಸಿಡಿ ರೂ.5ಕ್ಕೆ ಏರಿಕೆ, ಎಪಿಎಲ್‌ನಿಂದ ಬಿಪಿಎಲ್ ಪಟ್ಟಿಗೆ ಸೇರ್ಪಡೆ, 94ಸಿ, 94ಸಿಸಿ ಅಡಿಯಲ್ಲಿ ಹಕ್ಕುಪತ್ರ ವಿತರಣೆ, ಕೊರಗ ಸಮುದಾಯಕ್ಕೆ ಪಹಣಿಪತ್ರ, ಮಕ್ಕಳಿಗೆ ಕ್ಷೀರ ಭಾಗ್ಯ ಮುಂತಾದ ನೂರಾರು ಕಾರ್ಯಕ್ರಮ ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಸಭೆ ಪ್ರತಿಪಕ್ಷದ ಮುಖ್ಯ ಸಚೇತಕ, ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಎಲ್ಲಾ ಹಿಂದಿನ ಸರಕಾರಗಳು ಮಾಡಿದಂತಹ ಯೋಜನೆಗಳನ್ನು ಮುಂದುವರಿಸಿಕೊಂಡು ಬರುತ್ತಾ, ಆ ಯೋಜನೆಗಳನ್ನು ಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಇಂದಿನ ಸರಕಾರ ಕೂಡಾ ಮಾಡುತ್ತಿದೆ. 94ಸಿ ಮತ್ತು 94ಸಿಸಿ ಹಲವಾರು ವರ್ಷಗಳ ಸಮಸ್ಯೆಯಾಗಿದ್ದು, ಇದೀಗ ಆ ಕನಸು ನನನಸಾಗಿದೆ. ಅಕ್ರಮ-ಸಕ್ರಮ ಅರ್ಜಿಗಳು ಕೂಡಾ ವಿಲೇವಾರಿ ಮಾಡುವಲ್ಲಿ ಸಮಸ್ಯೆಯಿದೆ. ಅಲ್ಲದೆ ರೈತರ ಸಾಲ ಮನ್ನಾದಲ್ಲಿ ಈಗಾಗಲೇ ಸಾಲ ಕಟ್ಟಿದ ರೈತರಿಗೆ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅವಿಭಜಿತ ಜಿಲ್ಲೆಗೆ ಈ ಯೋಜನೆ ಹೆಚ್ಚು ಲಾಭವಾಗಿಲ್ಲ. ಇತ್ತೀಚೆಗೆ ಸಾಲ ಪಾವತಿಸಿದವರಿಗೂ ಅದರ ಪ್ರಯೋಜನ ದೊರೆಯುವಂತಾಗಬೇಕು ಎಂದು ಮನವಿ ಮಾಡಿದರು.
ಶೀಘ್ರದಲ್ಲಿ ಪರಿಹಾರ:
ಡೀಮ್ಡ್ ಪಟ್ಟಿಯಲ್ಲಿರುವ ಭೂಮಿಯನ್ನು ಸರ್ವೇ ಕಾರ್ಯ ನಡೆಸಲಾಗಿದೆ. ಆ ವರದಿಯನ್ನು ಸಚಿವ ಸಂಪುಟದಲ್ಲಿಟ್ಟು ಅನುಮೋದನೆ ಪಡೆದ ಬಳಿಕ, ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡುವ ಕೆಲಸವಾಗಲಿದೆ. ರಾಜ್ಯಾದ್ಯಾದಂತ ಹಲವು ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಈ ಬಾರಿ ಮುಕ್ತಿ ದೊರೆಯಲಿದೆ ಎಂದು ಶಾಸಕರ ಮನವಿಗೆ ಸಚಿವರು ಪ್ರತಿಕ್ರಿಯಿಸಿದರು. ಇದೇ ಸಂದರ್ಭದಲ್ಲಿ ಸಚಿವರು ಹಾಗೂ ಶಾಸಕರು 516 ಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು.
ವೇದಿಕೆಯಲ್ಲಿ ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್. ಕೋಟ್ಯಾನ್, ತಾ.ಪಂ.ಅಧ್ಯಕ್ಷೆ ಮಾಲಿನಿ ಶೆಟ್ಟಿ, ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಎಪಿಎಂಸಿ ಅಧ್ಯಕ್ಷ ಸತೀಶ್ ಶೆಟ್ಟಿ, ಜಿ.ಪಂ.ಸದಸ್ಯರಾದ ರೇಷ್ಮ ಶೆಟ್ಟಿ, ಸುಮಿತ್ ಶೆಟ್ಟಿ ದಿವ್ಯಾಶ್ರೀ ಅಮೀನ್, ತಾ.ಪಂ.ಸದಸ್ಯರುಗಳು, ಪುರಸಭೆ ಸದಸ್ಯರುಗಳು, ಗ್ರಾ.ಪಂ.ಅಧ್ಯಕ್ಷರುಗಳು, ವಿವಿಧ ಸ್ತರದ ಜನಪ್ರತಿನಿಗಳು, ಉಡುಪಿ ಜಿಲ್ಲಾಕಾರಿ ಪ್ರಿಯಾಂಕ ಮೇರಿ ಫ್ರಾ ನ್ಸಿಸ್, ಕುಂದಾಪುರ ಸಹಾಯಕ ಕಮಿಷನ್ನರ್ ಶಿಲ್ಪಾ ನಾಗ್, ಪುರಸಭೆ ಮುಖ್ಯಾಕಾರಿ ಮೇಬಲ್ ಡಿಸೋಜಾ, ತಾ.ಪಂ.ಕಾರ್ಯನಿರ್ವಹಣಾಕಾರಿ ಕೇಶವ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು.
ಕ್ಷೇತ್ರ ತಹಸೀಲ್ದಾರ್ ಟಿ.ಜಿ.ಗುರುಪ್ರಸಾದ್ ಸ್ವಾಗತಿಸಿದರು, ಶಶಿಧರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.