ಜೈಲಿನಲ್ಲಿ ಖೈದಿಗಳ ಮಾರಾಮಾರಿ
Update: 2017-07-13 22:59 IST
ಮಂಗಳೂರು, ಜು. 13: ಮಂಗಳೂರು ಜೈಲಿನಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿಯಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಓರ್ವ ವಿಚಾರಣಾಧೀನ ಕೈದಿ ಗಾಯಗೊಂಡಿದ್ದಾನೆ. ಕ್ಷುಲ್ಲಕ ಕಾರಣಕ್ಕಾಗಿ ಮುಡಿಪು ರಫೀಕ್ ಮತ್ತು ನಪಾಟ ರಫೀಕ್ ನಡುವೆ ಜಗಳ ಆರಂಭವಾಗಿದೆ. ಸಂಜೆ 6.30ರ ವೇಳೆಗೆ ಇವರ ಜಗಳ ತಾರಕಕ್ಕೇರಿದ ಪರಿಣಾಮ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಜೈಲು ಸಿಬ್ಬಂದಿ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ಗಾಯಗೊಂಡ ನಪಾಟ ರಫೀಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದಿರುವುದನ್ನು ಜೈಲು ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.