×
Ad

ಜು.16: ಅಲ್‌ಖೈರ್ ಮಹಿಳಾ ಕಾಲೇಜ್ ಉದ್ಘಾಟನೆ

Update: 2017-07-13 23:04 IST

ವಿಟ್ಲ, ಜು. 13: ವಿಟ್ಲದ ಮೇಗಿನಪೇಟೆಯಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ಅಲ್‌ಖೈರ್ ಮಹಿಳಾ ಕಾಲೇಜಿನ ಉದ್ಘಾಟನಾ ಸಮಾರಂಭ ಜು.16ರ ರವಿವಾರ ಸಂಜೆ 4 ಗಂಟೆಗೆ ವಿಟ್ಲದ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಲಿದ್ದಾರೆ. ವಿಟ್ಲ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ವಿ.ಎಚ್ ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೂರ್ನಡ್ಕ ಖತೀಬು ಅಬೂಬಕ್ಕರ್ ಸಿದ್ದೀಕ್ ಜಲಾಲೀ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ ಕೆ.ಎ. ಇದಾಯತ್ತುಲ್ಲಾ, ಅಲ್‌ಖೈರ್ ಎಜ್ಯುಕೇಶನಲ್ ಟ್ರಸ್ಟ್‌ನ ಸದಸ್ಯ ಇಬ್ರಾಹಿಂ ಏರ್‌ಸೌಂಡ್ಸ್, ಕೇಂದ್ರ ಜುಮಾ ಮಸೀದಿ ಖತೀಬು ಅಬ್ದುಲ್ ಸಲಾಂ ಲತೀಫಿ, ವಿಟ್ಲ-ಪರ್ತಿಪ್ಪಾಡಿ ಮಸೀದಿ ಖತೀಬು ಅಬ್ದುರ್ರಹ್ಮಾನ್ ಫೈಝೀ, ವಿಟ್ಲ ಕೇಂದ್ರ ಜುಮಾ ಮಸೀದಿ ಮಾಜಿ ಖತೀಬು ಮೂಸಲ್ ಫೈಝಿ, ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹೋನೆಸ್ಟ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News