ವಿಎಚ್‌ಪಿ ರಾ.ನಾಯಕರಿಂದ ಪೇಜಾವರಶ್ರೀಗಳ ಭೇಟಿ
Update: 2017-07-13 23:17 IST
ಉಡುಪಿ, ಜು.13: ವಿಶ್ವ ಹಿಂದೂ ಪರಿಷತ್ತಿನ ಅಖಿಲ ಭಾರತೀಯ ಉಪಾಧ್ಯಕ್ಷ ಜೀವೇಶ್ವರ್ ಮಿಶ್ರಾ ಅವರು ಇಂದು ಉಡುಪಿಗೆ ಆಗಮಿಸಿ, ಶ್ರೀಕೃಷ್ಣನ ದರ್ಶನ ಮಾಡಿ ಬಳಿಕ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಇದೇ ಸಂದರ್ಭದಲ್ಲಿ ಅವರು ಮುಂದಿನ ನವೆಂಬರ್ 23ರಿಂದ 26ರವರೆಗೆ ಉಡುಪಿಯಲ್ಲಿ ನಡೆಯುವ ಧರ್ಮ ಸಂಸದ್, ಸಂತ ಸಮ್ಮೇಳನದ ಕುರಿತು ವಿಎಚ್‌ಪಿಯ ರಾಷ್ಟ್ರೀಯ ಉಪಾದ್ಯಕ್ಷರೂ ಆಗಿರುವ ಶ್ರೀವಿಶ್ವೇಶತೀರ್ಥ ಶ್ರೀಪಾದರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಅಖಿಲಭಾರತ ಸಹ ಸಂಘಟನಾ ಮಂತ್ರಿ ರಾಘವೇಲು, ಕ್ಷೇತ್ರೀಯ ಸಂಘಟನಾ ಮಂತ್ರಿ ಗೋಪಾಲಜೀ, ಕಾರ್ಯಕಾರಿಣಿ ಸದಸ್ಯ ಡಿ.ಎಲ್.ಮೂರ್ತಿ, ಪ್ರಾಂತ ಅಧ್ಯಕ್ಷ ಎಂ.ಬಿ.ಪುರಾಣಿಕ್, ಜಿಲ್ಲಾಧ್ಯಕ್ಷ ವಿಶಾಲ್ ನಾಯಕ್, ನಗರಾಧ್ಯಕ್ಷ ಸಂತೋಷ್ ಸುವರ್ಣ, ಭಜರಂಗ ದಳ ವಿಭಾಗ ಸಂಚಾಲಕ ಸುನಿಲ್ ಕೆ.ಆರ್, ಬಾಲಾಜಿ ರಾಘವೇಂದ್ರಾಚಾರ್ ಮುಂತಾದವರು ಉಪಸ್ಥಿತರಿದ್ದರು.