×
Ad

48 ದಿನಗಳ ಕಾಲ ನಿಷೇದಾಜ್ಞೆ ಜಿಲ್ಲಾಡಳಿತದ ವೈಫಲ್ಯದ ಸೂಚನೆ-ಯಡಿಯೂರಪ್ಪ

Update: 2017-07-13 23:20 IST

ಮಂಗಳೂರು, ಜು.13: ಜಿಲ್ಲೆಯ ಬಂಟ್ವಾಳ ಸೇರಿದಂತೆ 48 ದಿನಗಳ ಕಾಲ ನಿಷೇದಾಜ್ಞೆ ಹೇರುವ ಮೂಲಕ ಜಿಲ್ಲಾಡಳಿತ ಶಾಂತಿ ಕಾಪಾಡಲು ತಮ್ಮಿಂದ ಆಗಿಲ್ಲ ಎನ್ನುವ ವೈಫಲ್ಯವನ್ನು ಒಪ್ಪಿಕೊಂಡಂತಾಗಿದೆ ಎಂದು ರಾಜ್ಯದ ಬಿಜೆಪಿ ಅಧ್ಯಕ್ಷ ಯುಡಿಯೂರಪ್ಪ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕಾನೂನು ಬಾಹಿರವಾಗಿ ಬಿಜೆಪಿ ಸಂಘ ಪರಿವಾರದ ಕಾರ್ಯಕರ್ತರನ್ನು ಬಂಧಿಸಿದರೆ ಸತ್ಯಾಗ್ರಹದೊಂದಿಗೆ ಹೋರಾಟ ನಡೆಸಲಾಗುವುದು. ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಬಂಧಿಸಿದರೆ ರಾಜ್ಯದಲ್ಲಿ ಬೆಂಕಿ ಹತ್ತಿ ಕೊಳ್ಳುತ್ತೆ ಅದಕ್ಕೆ ಸಚಿವರಾದ ರಮಾನಾಥ ರೈ ,ಯು.ಟಿ.ಖಾದರ್ ಹೊಣೆಗಾರರಾಗುತ್ತಾರೆ . ಜಿಲ್ಲೆಯಲ್ಲಿ ಶಾಂತಿ ನೆಲಸಬೇಕಾದರೆ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಸ್ವತಂತ್ರವಾಗಿ ತನಿಖೆ ನಡೆಸಲು ಅವಕಾಶ ನೀಡ ಬೇಕು ಎಂದು ಯಡಿಯೂರಪ್ಪ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೆ 24ಕ್ಕೂ ಅಧಿಕ ಸಂಘಪರಿವಾರದ ಕಾರ್ಯಕರ್ತರ ಕೊಲೆ ಆಗಿದೆ. ಈ ಕೊಲೆಯಲ್ಲಿ ಕೆಎಫ್‌ಡಿ ಕೈವಾಡ ಇದೆ. ಕೇರಳದ ಎಂ.ಪಿ ವೇಣು ಗೋಪಾಲ್‌ರ ಕುಮ್ಮಕ್ಕು ಇದೆ .ಆದುದರಿಂದ ಈ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆಯಾಗಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು, ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News