ತಾನು ಗೆದ್ದ ಅಂತಾರಾಷ್ಟ್ರೀಯ ಟ್ರೋಫಿಗಳನ್ನು ತೊಟ್ಟಿಗೆ ಎಸೆದ ಖ್ಯಾತ ಟೆನಿಸ್ ಆಟಗಾರ!

Update: 2017-07-14 12:38 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.14: ಟ್ರೋಫಿಗಳು ತನ್ನ ಯಶಸ್ಸನ್ನು ನಿರ್ಧರಿಸುವುದಿಲ್ಲ ಎಂದಿರುವ ಖ್ಯಾತ ಅಂತಾರಾಷ್ಟ್ರೀಯ ಟೆನಿಸ್ ಪಟು, ಮಾಜಿ ವಿಶ್ವದ ನಂಬರ್ ಒನ್ ಆಟಗಾರ ಆ್ಯಂಡಿ ರಾಡಿಕ್ ತಾನು ಜಯಿಸಿದ್ದ ಟ್ರೋಫಿಗಳನ್ನು ತೊಟ್ಟಿಗೆ ಎಸೆದಿದ್ದಾರೆ.

ಟೆಕ್ಸಾಸ್ ನ ಆಸ್ಟಿನ್ ನಲ್ಲಿರುವ ಮನೆಯ ಸ್ವಚ್ಛಕಾರ್ಯದ ಸಂದರ್ಭ ರಾಡಿಕ್ ತಾವು ಜಯಿಸಿದ್ದ ಯುಎಸ್ ಓಪನ್ ಟ್ರೋಫಿಯನ್ನು ಹೊರತುಪಡಿಸಿ ಇತರ ಎಲ್ಲಾ ಟ್ರೋಫಿಗಳನ್ನು ತೊಟ್ಟಿಗೆ ಎಸೆದಿದ್ದಾರೆ ಎಂದು ರಾಡಿಕ್ ರ ಪತ್ನಿ ಬ್ರೂಕ್ಲಿನ್ ಡೆಕರ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದುವ ಬ್ರೂಕ್ಲಿನ್ ಡೆಕರ್, “ಇದು ನಿಜಕ್ಕೂ ಬೇಸರದ ಸಂಗತಿ. ನಾನು ಮನೆಯಲ್ಲಿಲ್ಲದ ಸಂದರ್ಭ ಅವರು ಟ್ರೋಫಿಗಳನ್ನು ತೊಟ್ಟಿಗೆಸೆದಿದ್ದರು. ಟ್ರೋಫಿಗಳು ಯಶಸ್ಸನ್ನು ನಿರ್ಧರಿಸುವುದಿಲ್ಲ ಎಂದು ಭಾವಿಸಿದ್ದ ಅವರಿಗೆ, ಇವುಗಳು ಮನೆಯಲ್ಲಿ ಇರುವುದು ಇಷ್ಟವಿರಲಿಲ್ಲ. ಆದ್ದರಿಂದ ಅವುಗಳನ್ನು ಎಸೆದಿದ್ದಾರೆ” ಎಂದಿದ್ದಾರೆ.

ವಿಶ್ವದ ಶ್ರೇಷ್ಟ ಟೆನ್ನಿಸ್ ಆಟಗಾರನಾಗಿದ್ದ ರಾಡಿಕ್ 32 ಟೈಟಲ್ ಗಳನ್ನು ಗೆದ್ದಿದ್ದು, ನಂಬರ್ 1 ಸ್ಥಾನದಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News