ಸುನ್ನಿ ನಾಯಕರಿಂದ ಮಂಗಳೂರು ಕಮಿಷನರ್ ಭೇಟಿ
ಮಂಗಳೂರು, ಜು.14: ದ.ಕ.ಜಿಲ್ಲೆಯ ಇತ್ತೀಚೆಗಿನ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಸುನ್ನಿ ನಾಯಕರ ನಿಯೋಗವು, ಮಂಗಳೂರು ಪೊಲೀಸ್ ಕಮಿಷನರ್ ಟಿ. ಸುರೇಶ್ ಹಾಗೂ ಕರ್ನಾಟಕ ಸಿಐಡಿ ಇಕನಾಮಿಕ್ ಅಫೆನ್ಸ್ ವಿಂಗ್ ಐಜಿಪಿ ಎಂ. ಚಂದ್ರಶೇಖರ್ ರನ್ನು ಭೇಟಿಯಾಗಿ, ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.
ಜಿಲ್ಲೆಯ ವಿವಿಧೆಡೆಗಳಲ್ಲಿ ಆಗಾಗ ಅಹಿತಕರ ಘಟನೆಗಳು ನಡೆಯುತ್ತಿರುವುದರಿಂದ ಜನಸಾಮಾನ್ಯರು ಆತಂಕದಲ್ಲಿದ್ದಾರೆ. ಉದ್ರೇಕಕಾರಿ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಆತಂಕ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿಯೋಗವು ಆಗ್ರಹಿಸಿತು.
ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಸಿಟಿಎಂ ತಂಙಳ್ ಮನ್ ಶರ್, ಎಸ್ಸೆಸ್ಸೆಫ್ ರಾಜ್ಯ ಸುಪ್ರೀಂ ಕೌನ್ಸಿಲ್ ನಾಯಕ ಎನ್.ಕೆ.ಎಂ.ಶಾಫಿ ಸಅದಿ ಬೆಂಗಳೂರು, ಕೆಸಿಎಫ್ ಅಂತಾರಾಷ್ಟ್ರೀಯ ಮುಖಂಡ ಹಾಜಿ ಶೇಖ್ ಬಾವ, ಎಸ್ಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ, ಸಾದಿಕ್ ಮಾಸ್ಟರ್ ಹಾಗೂ ಎಸ್‌ವೈಎಸ್ ಮುಖಂಡರಾದ ಅಶ್ರಫ್ ಕಿನಾರ ಕುದ್ರೋಳಿ, ಅಲ್ ಸಫರ್ ಮೊಹಿದಿನ್ ಮುಂತಾದವರು ನಿಯೋಗದಲ್ಲಿದ್ದರು.