ಕೋಮುವಾದಿಗಳ ಅಜೆಂಡಗಳಿಗೆ ಬಲಿಯಾಗದಿರಿ: ಜಮಾಅತೆ ಇಸ್ಲಾಮಿ ಹಿಂದ್

Update: 2017-07-14 14:21 GMT

ಹೊಸದಿಲ್ಲಿ, ಜು.14: ದೇಶದಲ್ಲಿ ಹೆಚ್ಚುತ್ತಿರುವ ಜನರ ಗುಂಪಿನ ದಾಳಿ, ಕೊಲೆ ಪಾತಕಗಳನ್ನು ಎದುರಿಸುವುದಕ್ಕಾಗಿ ಸಹ ಜೀವಿಗಳ ನಡುವೆ ಸೇತುವೆ ನಿರ್ಮಿಸಬೇಕಾಗಿದೆ. ದ್ವೇಷ ಪ್ರಚಾರದಿಂದ ದೂರ ನಿಲ್ಲಬೇಕೆಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ  ಸೈಯದ್ ಜಲಾಲುದ್ದೀನ್ ಉಮರಿ ಹೊಸದಿಲ್ಲಿಯ ಜಮಾಅತೆ ಇಸ್ಲಾಮಿಯ ಕೇಂದ್ರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭಯ ಮತ್ತು ನಿರಾಶೆಯ ಭಾಷೆಯನ್ನು ಉಪಯೋಗಿಸಬಾರದು. ಅದರಂತೆ ನಾವು ಘರ್ಷಣಾತ್ಮಕ ಮತ್ತು ಕೋಮುವಾದಿ ಭಾಷೆಯನ್ನು ಕೂಡಾ ಬಳಸಬಾರದು. ನಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳು ಅಸಮತೋಲನದ ಹೇಳಿಕೆಗಳು ಕೋಮುವಾದಿಗಳ ಒಡಕು ಮೂಡಿಸುವ ಅಜೆಂಡಕ್ಕೆ ಸಹಕಾರಿಯಾಗಿ ಪರಿವರ್ತನೆಯಾಗುತ್ತದೆ. ಇತರ ಧರ್ಮದೊಂದಿಗೆ ಸಹೋದರತೆಯ ಸಂಬಂಧ ಬಲಪಡಿಸಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ  ಸೈಯದ್ ಜಲಾಲುದ್ದೀನ್ ಉಮರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News