ಬೆದರಿಕೆಯ ಆರೋಪ: ಐದು ಮಂದಿ ಸೆರೆ
ಪುತ್ತೂರು, ಜು. 14: ಖಾಸಗಿ ವ್ಯಕ್ತಿಯೊಬ್ಬರ ಮಾಲಕತ್ವದ ಕಲ್ಲು ಕೋರೆಗೆ ಅಕ್ರಮವಾಗಿ ಪ್ರವೇಶಿಸಿ ಹಣದ ಬೇಡಿಕೆಯಿಟ್ಟು ಜೀವಬೆದರಿಕೆ ಒಡ್ಡಿದ ಆರೋಪಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ನಗರ ಪೊಲೀಸರು ಪುತ್ತೂರು ರೈಲ್ವೆ ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು, ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕ ನಿವಾಸಿಗಳಾದ ನೂರುದ್ದೀನ್, ಅಬ್ದುಲ್ ಇರ್ಶಾದ್, ಅಬೂಬಕ್ಕರ್ ಸಿದ್ದೀಕ್, ಇಲ್ಯಾಸ್ ಮತ್ತು ಅಬ್ದುಲ್ ಸಮದ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಗುರುವಾದ ಮದ್ಯಾಹ್ನ ಆರೋಪಿಗಳು ತನ್ನ ಕಲ್ಲುಕೋರೆಗೆ ಅಕ್ರಮವಾಗಿ ಪ್ರವೇಶಗೈದು ಕೋರೆಯ ಕೆಲಸ ನಿಲ್ಲಿಸುವಂತೆ ತಿಳಿಸಿದ್ದರು. ಇದನ್ನು ಪ್ರಶ್ನಿಸಿದ ಸಂದರ್ಭದಲ್ಲಿ 2 ಲಕ್ಷ ರೂ. ನಗದು ನೀಡುವಂತೆ ತಿಳಿಸಿದ್ದು, ಕೊಡದಿದ್ದಲ್ಲಿ ಜೀವ ಸಹಿತಿ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿದ್ದರು ಎಂದು ಕಲ್ಲು ಕೋರೆ ಮಾಲಕ ಕಬಕ ನಿವಾಸಿ ಸುರೇಶ್ ಕಾಮತ್ ಪೊಲೀಸರಿಗೆ ದೂರು ನೀಡಿದ್ದರು.