×
Ad

ಕಾಸರಗೋಡು: ವಿದ್ಯಾರ್ಥಿನಿ ನಾಪತ್ತೆ

Update: 2017-07-14 20:02 IST

ಕಾಸರಗೋಡು, ಜು. 14: ಉದುಮದಿಂದ ನಾಪತ್ತೆಯಾಗಿರುವ ಸ್ನಾತಕೋತ್ತರ ವಿದ್ಯಾರ್ಥಿನಿ ಪಳ್ಳಿಕೆರೆ ಕರಿಪ್ಪೊಡಿಯ ಆದಿರಾ (23) ಪತ್ತೆಗೆ  ಪೊಲೀಸರು ಲುಕ್ ಔಟ್ ನೋಟಿಸ್ ಬಿಡುಗಡೆಗೊಳಿಸಿದ್ದಾರೆ.

ನೋಟಿಸ್ ಗಳನ್ನು  ಸಾರ್ವಜನಿಕ ಸ್ಥಳ, ಪೊಲೀಸ್ ಠಾಣೆ, ರೈಲ್ವೆ, ಬಸ್ ನಿಲ್ದಾಣ ಮೊದಲಾದೆಡೆಗಳಲ್ಲಿ ಲಗತ್ತಿಸಲಾಗಿದೆ.
 ಜು.10 ರಂದು  ಬೆಳಗ್ಗೆಯಿಂದ ಆದಿರಾ ನಾಪತ್ತೆಯಾಗಿದ್ದು, ನಾಪತ್ತೆ ಬಗ್ಗೆ ಹಲವು ಅನುಮಾನಗಳು ಉಂಟಾಗಿವೆ. ಧಾರ್ಮಿಕ  ಪಠನಕ್ಕೆ ತೆರಳುವುದಾಗಿ  ಹೇಳಿ ಹದಿನೈದು ಪುಟದ ಪತ್ರವೊಂದು ಬರೆದಿಟ್ಟು ಈಕೆ ತೆರಳಿದ್ದಾಳೆ.  ಜು. 10ರಂದು ಬೆಳಗ್ಗೆ  ಆಸ್ಪತ್ರೆಗೆಂದು ಹೇಳಿ ಈಕೆ ಮನೆಯಿಂದ ತೆರಳಿದ್ದು ಬಳಿಕ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ  ಬೇಕಲ ಠಾಣೆಯಲ್ಲಿ ದೂರು ನೀಡಲಾಗಿದೆ. ಈಕೆಯ ಬಗ್ಗೆ ಮಾಹಿತಿ ತಿಳಿದವರು ಬೇಕಲ ಪೊಲೀಸ್  ಠಾಣೆಗೆ  ಮಾಹಿತಿ ನೀಡಬೇಕು ಎಂದು ಪೊಲೀಸರು ಕೋರಿದ್ದಾರೆ.
ಬೇಕಲ  ಪೊಲೀಸ್ ಠಾಣೆ 0467-2236224,  ಬೇಕಲ ಸರ್ಕಲ್ ಇನ್ಸ್ ಪೆಕ್ಟರ್  9497964323, ಬೇಕಲ ಸಬ್ ಇನ್ಸ್ ಪೆಕ್ಟರ್  9497980916  ಮಾಹಿತಿ ನೀಡುವಂತೆ  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News