ಫೋಟೊಗಳಿಗಿಂತ ಪ್ರಕೃತಿಯನ್ನು ಪೂಜೆ ಮಾಡಿ: ನವೀನ್ ಡಿ ಪಡಿಲ್
ಮಂಗಳೂರು, ಜು. 14: ಮುಂಜಾನೆ ದೇವರಿಗೆ ಪೋಜೆ ಇದೆ ಎಂಬ ಕಾರಣಕ್ಕಾಗಿ ಅವಸರವಾಗಿ ಗಿಡದಿಂದ ಹೂವು ಕಿತ್ತು ದೇವರ ಫೋಟೊಗೆ ಇಡುತ್ತೇವೆ ಇದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ ಎಂದು ತುಳು ಚಿತ್ರ ನಟ ನವೀನ್ ಡಿ ಪಡೀಲ್ ಹೇಳಿದರು.
ಮಂಗಳೂರಿನ ಪುರಭವನದಲ್ಲಿ ನಡೆದ ಅರಣ್ಯ ಇಲಾಖೆ ಆಯೋಜಿಸಿದ ನೀರಿಗಾಗಿ ಅರಣ್ಯ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪ್ರಕೃತಿಯಲ್ಲಿನ ಪಕ್ಷಿ ಮತ್ತು ಚಿಟ್ಟೆಗಳಂತಹ ಜೀವಿಗಳಿಗಾಗಿ ದೇವರು ಹೂವಗಳನ್ನು ನೀಡಿದರೆ, ನಾವು ಕೇವಲ ಒಂದು ಪೋಟೊವನ್ನು ಪೂಜಿಸುವುದಕ್ಕಾಗಿ ಹೂವುಗಳನ್ನು ಕೀಳುತ್ತಿದ್ದೇವೆ. ಸೆವಂತಿಗೆ, ಮಲ್ಲಿಗೆಯಂತಹ ಪೂಜಾ ಹೂವುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿ, ಬೇಲಿಯಲ್ಲಿರುವ ಹೂವುಗಳನ್ನು ಕೀಳ ಬೇಡಿ, ಕೀಳುವಿದಾದರೆ ಮಧ್ಯಾಹ್ನದ ನಂತರ ಕೀಳಿ ಎಂದು ತನ್ನಲ್ಲಿರುವ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಚಿವ ರಮಾನಾಥ ರೈ, ಮೇಯರ್ ಕವಿತಾ ಸನಿಲ್, ಜೆ ಆರ್ ಲೋಬೊ, ಶಾಸಕ ಮೊಯ್ದಿನ್ ಬಾವಾ, ಹಿರಿಯ ನಾಡೋಜ ಪದ್ಮಶ್ರೀ ಪುರಷ್ಕೃತ ಡಾ. ನಿಸಾರ್ ಅಹ್ಮದ್, ನಾಡೋಜ ಡಾ. ಸಾಲುಮರದ ತಿಮ್ಮಕ್ಕ , ಬೆಂಗಳೂರು ಪಶ್ಚಿಮ ಘಟ್ಟ ಕಾರ್ಯ ಪಡೆ ಅಧ್ಯಕ್ಷ ಎಸ್. ಚಂದ್ರಶೇಖರ್ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಹಮ್ಮದ್ ಮೋನು, ಡಾ. ಬಿ.ಎ. ಕುಮಾರ್ ಹೆಗ್ಡೆ ಹಾಗು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.