×
Ad

ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2017-07-14 20:30 IST

ಮಂಜೇಶ್ವರ, ಜು. 14: ಹಲವಾರು ಮನೆಗಳಿಂದ ನಗ-ನಗದು ಕಳವುಗೈದ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರಿಕ್ಕಾಡಿ ಬನ್ನಂಗುಳ ನಿವಾಸಿ ಸಿದ್ದಿಕ್ ಯಾನೆ ಪುಂಡಿ ಸಿದ್ದಿಕ್ (45), ಕುಂಜತ್ತೂರು ನಿವಾಸಿ ಮುಹಮ್ಮದ್ ಅಜ್ಮಲ್ ಯಾನೆ ಬ್ರಿಟಿಷ್ ಅಜ್ಮಲ್ (24) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಪುಂಡಿ ಸಿದ್ದಿಕ್ ಪಚ್ಚಂಬಳದಲ್ಲಿ 5 ಮನೆಗಳ ಸಹಿತ 20 ಕ್ಕಿಂತ ಹೆಚ್ಚು ಮನೆಗಳಿಂದ ನಗ-ನಗದು ದೋಚಿದ ಪ್ರಕರಣದ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News