ಕಡಬ ಟೌನ್ ಜುಮಾ ಮಸೀದಿ ಮುದರ್ರಿಸ್‌ಗೆ ಸನ್ಮಾನ, ಬೀಳ್ಕೊಡುಗೆ
Update: 2017-07-14 20:32 IST
ಕಡಬ, ಜು.14. ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಕಡಬ ರಹ್ಮಾನಿಯಾ ಟೌನ್ ಜುಮಾ ಮಸೀದಿಯ ಮುದರ್ರಿಸ್ ಪಿ.ಎಂ. ಇಬ್ರಾಹಿಂ ದಾರಿಮಿ ಯವರನ್ನು ಜಮಾಅತ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ ಖಾದರ್ ವಹಿಸಿದ್ದರು. ಉಪಾಧ್ಯಕ್ಷರಾದ ಮಹಮ್ಮದ್ ಮುಸ್ಲಿಯಾರ್, ಹಾಜಿ ಸೈಯದ್ ಸಾಹೇಬ್ ಕಳಾರ, ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎಸ್.ಅಬ್ದುಲ್ ಹಮೀದ್, ಕೋಶಾಧಿಕಾರಿ ಹಾಜಿ ಕೆ.ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿ ಕೆ.ಎಂ.ಫಾರೂಕ್ ಮೊದಲಾದವರು ಶುಭಹಾರೈಸಿದರು. ಕಾರ್ಯದರ್ಶಿ ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ, ಹಾಜಿ ಹನೀಫ್ ಕೆ.ಎಂ.ವಂದಿಸಿದರು.