×
Ad

ಕಡಬ: ಬಿಜೆಪಿ ವಿಸ್ತಾರಕರಿಂದ ಮನೆ ಮನೆ ಭೇಟಿ

Update: 2017-07-14 20:50 IST

ಕಡಬ, ಜು.14. ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳು ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದ ವೇಳೆ ಜಾರಿಗೊಳಿಸಿದ ಜನಪರ ಯೋಜನೆಗಳ ಬಗ್ಗೆ ಮನೆ ಮನೆಗೆ ತೆರಳಿ ಪ್ರಚಾರಪಡಿಸುವ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಕೊಡಗಿನ ಮನು ಮುತ್ತಪ್ಪ ಕಡಬ ಶಕ್ತಿ ಕೇಂದ್ರ ವ್ಯಾಪ್ತಿಯ ಕೋಡಿಂಬಾಳ ಗ್ರಾಮದಲ್ಲಿ ವಿಸ್ತಾರಕರಾಗಿ ಶುಕ್ರವಾರದಂದು ಮನೆ ಮನೆ ಭೇಟಿ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಮಾಜಿ ಅಧ್ಯಕ್ಷಸತೀಶ್ ನಾಯಕ್, ಅಲ್ಪಸಂಖ್ಯಾತ ಮೋರ್ಛಾದ ಸುಳ್ಯ ಮಂಡಲ ಕಾರ್ಯದರ್ಶಿ ಫಯಾರ್ ಕೆನರಾ, ಬಿಜೆಪಿ ಕಡಬ ಗ್ರಾ.ಪಂ. ಸಮಿತಿಯ ಅಧ್ಯಕ್ಷ ಗಿರೀಶ್ ಎ.ಪಿ., ಕಾರ್ಯದರ್ಶಿ ಅಶೋಕ್ ಕುಮಾರ್ ಪಿ., ಗ್ರಾ.ಪಂ. ಸದಸ್ಯ ಆದಂ ಕುಂಡೋಳಿ, ಪ್ರಮುಖರಾದ ಸೋಮಯ್ಯ ದೇರೋಡಿ, ವಾಸು, ಅನಿಲ್ ರೈ ಮುಂತಾದವರು ಜತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News