ಎಸ್ಮಾ ಪ್ರಯೋಗಕ್ಕೆ ಹೈಕೋರ್ಟ್ ಆದೇಶ
Update: 2017-07-14 21:26 IST
ಕಾಸರಗೋಡು, ಜು. 14: ನರ್ಸ್ ಗಳ ಮುಷ್ಕರ ಎದುರಿಸಲು ಎಸ್ಮಾ ಕಾಯ್ದೆಯನ್ನು ಬಳಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.
ಮುನುಷ್ಯನ ಜೀವ ಮುಖ್ಯ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದೆ.
ಖಾಸಗಿ ಆಸ್ಪತ್ರೆ ಮಾಲಕರ ಅಸೋಸಿಯೇಷನ್ ನೀಡಿದ ಅರ್ಜಿಯನ್ನು ಪರಿಗಣಿಸಿ ಈ ತೀರ್ಫು ನೀಡಿದೆ.
ಈ ನಡುವೆ ಸೋಮವಾರದಿಂದ ನಡೆಸಲುದ್ದೇಶಿಸಿರುವ ಮುಷ್ಕರದಿಂದ ಯಾವುದೇ ಕಾರಣಕ್ಕೆ ಹಿಂದೆ ಸರಿಯುವುದಿಲ್ಲ ಎಂದು ಯುನೈಟೆಡ್ ನರ್ಸಸ್ ಅಸೋಷಿಯೇಷನ್ ತಿಳಿಸಿದೆ. ಸುಪ್ರೀಂ ಕೋರ್ಟ್ ನ ಆದೇಶದಂತೆ ವೇತನ ಹೆಚ್ಚಳ ಲಭಿಸಬೇಕಿದೆ. ಆದೇಶದ ಬಗ್ಗೆ ಕಾನೂನು ರೀತಿಯಲ್ಲಿ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಂಘಟನೆ ತಿಳಿಸಿದೆ.