ಮಂಗಳಾ ಕಿಡ್ನಿ ಫೌಂಡೇಶನ್‌ನ ಹೊಸ ನಿರ್ದೇಶಕರಾಗಿ ಯುರೋಲಾಜಿಸ್ಟ್ ಡಾ.ಮೊಯ್ದಿನ್ ನಫ್ಸೀರ್

Update: 2017-07-14 16:37 GMT

ಮಂಗಳೂರು, ಜು.14: ನಗರದ ಕದ್ರಿ ರಸ್ತೆಯಲ್ಲಿ ಕಳೆದ 24 ವರ್ಷಗಳಿಂದ ಜನರ ವೈದ್ಯಕೀಯ ಸೇವೆಯಲ್ಲಿ ತೊಡಗಿರುವ ಮಂಗಳಾ ಆಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್‌ಗೆ ಖ್ಯಾತ ಯುರೋಲಾಜಿಸ್ಟ್ ಡಾ.ಮೊಯ್ದಿನ್ ನಫ್ಸೀರ್  ಅವರು ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದು ವೈದ್ಯಕೀಯ ಸೇವೆಗೆ ಲಭ್ಯರಿರುವರು.

ಇವರು ಮಂಗಳಾ ಕಿಡ್ನಿ ಫೌಂಡೇಶನ್‌ನಲ್ಲಿ ಯುರಾಲಜಿ ವಿಭಾಗದಲ್ಲಿಯೂ ತಮ್ಮ ಅಪಾರ ವೈದ್ಯಕೀಯ ಅನುಭವವನ್ನು ಬಳಸಿ ರೋಗಿಗಳ ಸೇವೆಯಲ್ಲಿ ತೊಡಗಿದ್ದಾರೆ. ಮಂಗಳಾ ಕಿಡ್ನಿ ಫೌಂಡೇಶನ್ ಎಲ್ಲಾ ಆಧುನಿಕ ವೈದ್ಯಕೀಯ ಸವಲತ್ತುಗಳಿಂದ ಸಜ್ಜಿತಗೊಂಡಿದ್ದು, ಸಂಪೂರ್ಣ ಮೂತ್ರಜನಕಾಂಗದ ಶುಶ್ರೂಷೆಯಲ್ಲಿ ಮುಂಚೂಣಿಯಲ್ಲಿದೆ.

ಇಲ್ಲಿ ಅಳವಡಿಸಲಾದ ಯುರೆಟ್ರೊರಿನೊಸ್ಕೊಪಿ ಎಂಡೊಸ್ಕೊಪಿ ದೃಶ್ಯಾವಳಿ ಮತ್ತು ಮೂತ್ರಜನಕಾಂಗದಲ್ಲಿ ಅಡಗಿರುವ ಕಲ್ಲುಗಳನ್ನು ಹೊರತೆಗೆಯುವುದು, ಪರ್ಕ್ಯುಟೆನೀಯಸ್ ನೆಫ್ರೊ ಲಿಥೊಟ್ರಿಪ್ಸಿ  (PCNL) ದೊಡ್ಡ ಕಿಡ್ನಿ ಕಲ್ಲುಗಳನ್ನು ನಿವಾರಿಸಲು ಸಹಕರಿಸುವುದು, ಎಕ್ಟ್ರಾ ಕಾರ್ಪೊರಿಯಲ್ ಶಾಕ್ ವೇವ್ ಲಿಥೊಟ್ರಿಪ್ಸಿ ಯಾವುದೇ ಸರ್ಜರಿಯಿಲ್ಲದೇ, ಹೊರ ರೋಗಿಗಳಾಗಿ ಕಿಡ್ನಿ ಕಲ್ಲುಗಳನ್ನು ಹುಡಿಗೊಳಿಸಿ ನೋವಿನಿಂದ ಮುಕ್ತಿಗೊಳಿಸುವುದು, ಇಂತಹ ಚಿಕಿತ್ಸೆಯು ದ.ಕ. ಜಿಲ್ಲೆಯಲ್ಲೇ ಪ್ರಪ್ರಥಮವಾಗಿದೆ.

ಮಂಗಳಾ ಕಿಡ್ನಿ ಫೌಂಡೇಶನ್ ಕಿಡ್ನಿ ಕಸಿಯ ಸವಲತ್ತನ್ನು ಹೊಂದಿದ್ದು ಮೆಡಿಕಲ್ ಕಾಲೇಜು ಆಸ್ಪತ್ರೆ ಹೊರತುಪಡಿಸಿ ಪ್ರಪ್ರಥಮ ಖಾಸಗಿ ಆಸ್ಪತ್ರೆಯಾಗಿದೆ ಹಾಗೂ ಮಾನವ ಅಂಗಾಂಗ ಕಸಿ ಕಾಯ್ದೆಯಡಿ ಮಂಗಳೂರು ನಗರದಲ್ಲಿ 4ನೇ ಆಸ್ಪತ್ರೆಯಾಗಿದೆ. ಮಂಗಳಾ ಕಿಡ್ನಿ ಫೌಂಡೇಶನ್‌ನಲ್ಲಿ ಕರ್ನಾಟಕದಲ್ಲೇ ಪ್ರಥಮ ಮತ್ತು ದೇಶದಲ್ಲೇ ದ್ವಿತೀಯ ಲೇಸರ್ ಯೂನಿಟ್ಟನ್ನು ಅಳವಡಿಸಲಾಗಿದ್ದು, ಯುರಾಲಜಿ ಕೇಸುಗಳಿಗೆ ಇದನ್ನು ಉಪಯೋಗಿಸಲಾಗುತ್ತಿದೆ.

ಮಂಗಳಾ ಕಿಡ್ನಿ ಫೌಂಡೇಶನ್‌ನ ಮುಖ್ಯ ಧ್ಯೇಯವೆಂದರೆ ಸೇವಿಂಗ್ ಲೈಫ್‌ ಆಗಿದ್ದು ಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ನೀಡುತ್ತಿದೆ. ಮಂಗಳಾ ಆಸ್ಪತ್ರೆ ಈಗಾಗಲೇ ರಿಯಾಯಿತಿ ದರದಲ್ಲಿ ವೈದ್ಯಕೀಯ ಸೇವೆ ಮತ್ತು ಚಿಕಿತ್ಸೆ ನೀಡುತ್ತಿದ್ದು, ಇದರಲ್ಲಿ ಯುರಾಲಜಿ ವಿಭಾಗವು ಒಳಗೊಂಡಿರುತ್ತದೆ.

ಯುರಾಲಜಿಗೆ ಸಂಬಂಧಪಟ್ಟ ಯಾವುದೇ ವೈದ್ಯಕೀಯ ಚಿಕಿತ್ಸೆ / ಶುಶ್ರೂಷೆಗಾಗಿ ಮಂಗಳಾ ಆಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್, ವಜ್ರ ಹಿಲ್ಸ್, ಕದ್ರಿ ರಸ್ತೆ, ಮಂಗಳೂರು, ದೂರವಾಣಿ: 0824-2443088, 2443286, 2443445, 2443446, 09449599234 ಸಂಪರ್ಕಿಸುವಂತೆ ಮಂಗಳಾ ಆಸ್ಪತ್ರೆಯ ನಿರ್ದೇಶಕರಾದ ಡಾ.ಗಣಪತಿ ಪಿ ಮತ್ತು ಡಾ.ಮೊಯ್ದಿನ್ ನಫ್ಸೀರ್  ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News