×
Ad

ಡಾರ್ಜಿಲಿಂಗ್: ಮತ್ತೆ ನಾಲ್ಕು ಸಿಆರ್‌ಫಿಎಫ್ ತುಕಡಿ

Update: 2017-07-14 22:51 IST

ಡಾರ್ಜಿಲಿಂಗ್, ಜು. 14: ಪ್ರತ್ಯೆಕ ಗೂರ್ಖಾಲ್ಯಾಂಡ್ ಚಳವಳಿ ಗ್ರಸ್ತ ಡಾರ್ಜಿಲಿಂಗ್ ಹಾಗೂ ಕಾಲಿಂಪೋಂಗ್‌ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಮೀಸಲು ಪಡೆಯ ನಾಲ್ಕು ಹೆಚ್ಚುವರಿ ತುಕಡಿಗಳನ್ನು ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

  ಡಾರ್ಜಿಲಿಂಗ್ ಹಾಗೂ ಕಾಲಿಂಪೋಂಗ್‌ನಲ್ಲಿ ಈಗಾಗಲೇ ಕೇಂದ್ರ ಮೀಸಲು ಪಡೆಯ 11 ತುಕಡಿಗಳನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ನಾಗರಿಕರ ಸುರಕ್ಷೆಗೆ ಇನ್ನೂ ನಾಲ್ಕು ಕೇಂದ್ರ ಮೀಸಲು ಪಡೆಯ ತುಕಡಿಗಳನ್ನು ಕಳುಹಿಸಲು ನಿರ್ಧರಿಸಲಾಗಿದೆ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠಕ್ಕೆ ಸರಕಾರ ತಿಳಿಸಿದೆ.

 ಆ ಪ್ರದೇಶಗಳಿಗೆ ಸಿಆರ್‌ಪಿಎಫ್‌ನ ಹೆಚ್ಚುವರಿ ತಂಡಗಳನ್ನು ನಿಯೋಜಿಸುವಂತೆ ಕೋಲ್ಕತ್ತಾ ಉಚ್ಚ ನ್ಯಾಯಾಲಯ ಶುಕ್ರವಾರ ಆದೇಶಿಸಿತ್ತು. ಸರಕಾರ ಹೆಚ್ಚುವರಿ ಅರೆ ಸೈನಿಕ ಪಡೆ ಕಳುಹಿಸಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲನ್ ಪೀಠಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News