ಪನತ್ತಡಿ ಮೂಕುಟ್ಟಿಚ್ಚಾಲ್ ವಾಟರ್ ಶೆಡ್ , ಮಣ್ಣು ಜಲ ಸಂರಕ್ಷಣಾ ಯೋಜನೆಯ ಉದ್ಘಾಟನೆ
ಕಾಸರಗೋಡು, ಜು. 14: ರಾಜ್ಯದಲ್ಲಿ 63 ಲಕ್ಷ ಕುಟುಂಬಗಳಿಗೆ ತರಕಾರಿ ಬೀಜ ಒದಗಿಸಲಾಗುವುದು ಎಂದು ಕೇರಳ ಕೃಷಿ ಸಚಿವ ವಿ.ಎಸ್. ಶಿವಕುಮಾರ್ ಹೇಳಿದರು.
ಅವರು ಶುಕ್ರವಾರ ಕಾಸರಗೋಡಿನ ಪನತ್ತಡಿ ಮೂಕುಟ್ಟಿಚ್ಚಾಲ್ ವಾಟರ್ ಶೆಡ್ ಮಣ್ಣು ಜಲ ಸಂರಕ್ಷಣಾ ಯೋಜನೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಬಾರಿಯ ಓಣಂ ಹಬ್ಬಕ್ಕೆ ಸ್ವಂತ ರಾಜ್ಯದಲ್ಲಿ ಬೆಳೆಸಿದ ತರಕಾರಿ ಬಳಸುವಂತಾಗಬೇಕು. ಹೊರರಾಜ್ಯಗ ಳ ತರಕಾರಿ ಅವಲಂಬಿಸುವಂತಾಗಬಾರದು. ಇದರಿಂದ 63 ಲಕ್ಷ ಕುಟುಂಬಗಳಿಗೆ ತರಕಾರಿ ಬೀಜ ತಲಪಿಸುವ ಗುರಿ ಹೊಂದಿದೆ. ಸ್ಥಳೀಯ ಸಂಸ್ಥೆ, ಕೃಷಿ ಇಲಾಖೆ , ಕುಟುಂಬಶ್ರೀ , ಸಾರ್ವಜನಿಕರ ಸಹಕಾರ ಇದ್ದಲ್ಲಿ ತರಕಾರಿ ಬೆಳೆಯಲ್ಲೂ ಸ್ವಾವಲಂಬಿಯಾಗಲು ಸಾಧ್ಯ ಎಂದು ಹೇಳಿದರು.
ವಿಷಮುಕ್ತ ತರಕಾರಿ ಗುರಿ ಸರ್ಕಾರದ್ದಾಗಿತ್ತು . ಉತ್ತಮ ಕೃಷಿಕರಿಗೆ ಪಾರಿತೋಷಕ ನೀಡಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್ , ಜಿಲ್ಲಾ ಪಂಚಾಯತ್ ಸದಸ್ಯೆ ಇ. ಪದ್ಮಾವತಿ, ಪಂಚಾಯತ್ ಉಪಾಧ್ಯಕ್ಷ ಹೇಮಾಂಬಿಕಾ, ಎಂ.ಸಿ ಮಾಧವನ್ , ರಜನಿ ದೇವಿ , ಜೆಸ್ಟಿನ್ ಮೋಹನ್, ಅಶೋಕ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.