ಟಿಪ್ಪರ್ ಸಹಿತ ಮರಳು ವಶ
Update: 2017-07-14 23:04 IST
ಮಂಗಳೂರು, ಜು.14: ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಗುರುವಾರ ವಾಹನ ತಪಾಸಣೆ ನಡೆಸುತ್ತಿದ್ದ ಪಣಂಬೂರು ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ. ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರಳನ್ನು ಟಿಪ್ಪರ್ ಸಮೇತ ವಶಪಡಿಸಿಕೊಂಡಿದ್ದಾರೆ.
ಜೋಕಟ್ಟೆ ಕಡೆಯಿಂದ ಟಿಪ್ಪರ್ ಬರುವುದನ್ನು ಕಂಡ ಇನ್‌ಸ್ಪೆಕ್ಟರ್ ನಿಲ್ಲಿಸಲು ಸೂಚಿಸಿದಾಗ ಆರೋಪಿ ಟಿಪ್ಪರ್ ಚಾಲಕ ವಾಹನ ನಿಲ್ಲಿಸಿ ಪರಾರಿಯಾಗಿದ್ದಾನೆ. ಟಿಪ್ಪರ್‌ನಲ್ಲಿ ಸುಮಾರು 10 ಸಾವಿರ ರೂ. ಬೆಲೆಯ ಮರಳು ಕಂಡು ಬಂದಿದ್ದು, ಇದನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಸಾಗಿಸುತ್ತಿರಬೇಕು ಎಂದು ಶಂಕಿಸಲಾಗಿದೆ. ವಶಪಡಿಸಿಕೊಂಡ ಟಿಪ್ಪರ್‌ನ ವೌಲ್ಯ 4 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.