ಎಂಡೋಸಲ್ಫಾನ್ ಸಂತ್ರಸ್ಥರಿಗೆ ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿಗೆ ಕೇರಳ ಸರಕಾರ ತೀರ್ಮಾನ : ಇ. ಚಂದ್ರಶೇಖರನ್
ಕಾಸರಗೋಡು,ಜು.15 : ಎಂಡೋಸಲ್ಫಾನ್ ಸಂತ್ರಸ್ಥರಿಗೆ ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿ ನೀಡಲು ರಾಜ್ಯ ಸರಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳಲಿದೆ. ಈ ಕುರಿತು ವಿದ್ಯುನ್ಮoಡಲಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್ ಸಂತ್ರಸ್ಥರ ಪುನರ್ವಸತಿ ಸಭೆಯಲ್ಲಿ ಸಚಿವರು ಈ ಭರವಸೆ ನೀಡಿದರು.
ಜನರಲ್ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಸಂದರ್ಭದಲ್ಲಿ ಬಾಲಕನ ಕಾಲಿನ ಎಲುಬು ಹುಡಿಯಾದ ಘಟನೆ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶ ನೀಡಲಾಗಿದೆ. ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಮಂಡಿನೋವಿನ ಹಿನ್ನಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆತರಲಾಗಿದ್ದ ಎಂಡೋ ಸಂತ್ರಸ್ಥ ಅದೂರಿನ ಮುಹಮ್ಮದ್ ರಝಾಕ್ ಎಂಬಾತನಿಗೆ ಫಿಸಿಯೋಥೆರಪಿ ಸಂದರ್ಭ ಕಾಲಿನ ಎಲುಬು ಹುಡಿಯಾಗಿದ್ದು, ಗಂಭೀರ ಸ್ಥಿತಿಯಲ್ಲಿ ಬಾಲಕ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸಚಿವರು ಹೇಳಿದರು.
ಎಂಡೋ ಸಂತ್ರಸ್ಥರ ಪಟ್ಟಿಯನ್ನು ಶೀಘ್ರ ತಯಾರಿಸಲು ಆದೇಶ ನೀಡಿದರು.
ಮೃತಪಟ್ಟ ಎಂಡೋ ಸಂತ್ರಸ್ಥರ ಕುಟುಂಬಗಳಿಗೆ ಕೆಲ ದಾಖಲೆ ಪಾತ್ರಗಳು ಸಮರ್ಪಕವಾಗಿ ಸಹಾಯಧನ ವಿತರಿಸಲು ಸಾಧ್ಯವಾಗಿಲ್ಲ . ಶೀಘ್ರ ಈ ಬಗ್ಗೆ ಕ್ರಮ ಕಗೊಳ್ಳಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು .
ಜಿಲ್ಲೆಯ ಆರು ಪಂಚಾಯತ್ ಗಳಲ್ಲಿ ನಡೆಯುತ್ತಿರುವ ವೈದ್ಯಕೀಯ ಶಿಬಿರ ಆಗಸ್ಟ್ ೧೦ ರಂದು ಪೂರ್ಣಗೊಳ್ಳಲಿದೆ ಎಂಡೋ ಸಂತ್ರಸ್ಥ ವಲಯದ ಪಂಚಾಯತ್ ಗಳಿಗೆ ಒದಗಿಸಿರುವ ಅಂಬ್ಯುಲೆನ್ಸ್ ಗಳ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಬೇಕೆಂದು ತಿಳಿಸಲಾಯಿತು. ಮುಳಿಯಾರು ನಲ್ಲಿ ಎಂಡೋ ಸಂತ್ರಸ್ತರ ಪುನರ್ವಸತಿ ಗ್ರಾಮ ಯೋಜನೆಗೆ ಎರಡು ವಾರದೊಳಗೆ ಅನುಮತಿ ಲಭಿಸಲಿದೆ. ಎಂಬ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಕೆ . ಜೀವನ್ ಬಾಬು ತಿಳಿಸಿದರು.
ಸಭೆಯಲ್ಲಿ ಶಾಸಕ ಕೆ. ಕುಞರಾಮನ್, ಹೆಚ್ಚುವರಿ ದಂಡಾಧಿಕಾರಿ ಕೆ . ಅಂಬುಜಾಕ್ಷನ್ , ನೀಲೇಶ್ವರ ನಗರಸಭಾ ಅಧ್ಯಕ್ಷ ಕೆ. ಪಿ ಜಯರಾಜನ್ , ಎಂಡೋ ಸಲ್ಫಾನ್ ಸೆಲ್ ನ ಉಪ ಜಿಲ್ಲಾಧಿಕಾರಿ ಸಿ . ಬಿಜು ಹಾಗೂ ಜನಪ್ರತಿನಿಧಿಗಳು ಅಧಿಕಾರಿಗಳು ಉಪಸ್ಥಿತರಿದ್ದರು