×
Ad

ಪತ್ರಿಕಾ ದಿನಾಚರಣೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

Update: 2017-07-15 19:07 IST

ಭಟ್ಕಳ,ಜು.15: ಪತ್ರಕರ್ತರ ಸಂಘ ಭಟ್ಕಳ ಹಾಗೂ ಸಿದ್ದಾರ್ಥ ಎಜುಕೇಶನ್ ಟ್ರಸ್ಟ್‍ನ ಸಹಯೋಗದಲ್ಲಿ ಜು.29ರಂದು ಇಲ್ಲಿನ ಕಮಲಾವತಿ ರಾಮನಾಥ ಶಾನುಭಾಗ್ ಸಭಾಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಹಾಗೂ ಭಟ್ಟಾಕಳಂಕ ಪ್ರಶಸ್ತಿ ವಿತರಣೆ,ಸನ್ಮಾನ ಕಾರ್ಯಕ್ರಮದ ಅಂಗವಾಗಿ ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಜು.22ರಂದು ತಾಲ್ಲೂಕುಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

'ಭಾವೈಕ್ಯತೆ, ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ಪತ್ರಿಕೆ ಮತ್ತು ಪತ್ರಕರ್ತರ ಪಾತ್ರ' ಈ ವಿಷಯದ ಕುರಿತಾಗಿ ಕನ್ನಡ ಮಾಧ್ಯಮದಲ್ಲಿ ಪ್ರಬಂಧ ಸ್ಪರ್ಧೆ 
ಏರ್ಪಡಿಸಲಾಗಿದೆ.ಭಟ್ಕಳ ಪಟ್ಟಣದ ಸಿದ್ದಾರ್ಥ ಪದವಿಪೂರ್ವ ಕಾಲೇಜಿನಲ್ಲಿ ಜು.22ರಂದು ಬೆಳಗ್ಗೆ 11ಗಂಟೆಯಿಂದ 12 ಗಂಟೆವರೆಗೆ ನಡೆಯಲಿರುವ ಸ್ಪರ್ಧೆಯಲ್ಲಿ ತಾಲ್ಲೂಕಿನ ಎಲ್ಲಾ ಕಾಲೇಜುಗಳ ಪ್ರಥಮ ಪಿಯುಸಿಯಿಂದ ವಿವಿಧ ಪದವಿ ತರಗತಿಗಳ ವಿದ್ಯಾರ್ಥಿಗಳು,ತಮ್ಮ ಕಾಲೇಜಿನ ಪ್ರಾಂಶುಪಾಲರ 
ಅನುಮತಿ ಪತ್ರದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಸ್ಪರ್ಧೆಯಲ್ಲಿ 4 ಪುಟಕ್ಕೆ ಮೀರದಂತೆ ಪ್ರಬಂಧವನ್ನು ಬರೆಯಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ,ದ್ವಿತೀಯ,ತೃತೀಯ ಹಾಗೂ ಇಬ್ಬರಿಗೆ ಸಮಾಧಾನಕರ ನಗದು ಬಹುಮಾನವನ್ನು ಜು.29ರಂದು ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಷ್ಣು ದೇವಾಡಿಗ ಮೊ.9341440214, ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ್ ಮೊ.9980431987ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News