×
Ad

ಸೌರವ್ಯೂಹ,ಬಾಹ್ಯಾಕಾಶ ಕುರಿತು ವಿಶೇಷ ಉಪನ್ಯಾಸ

Update: 2017-07-15 19:08 IST

ಭಟ್ಕಳ,ಜು.15 :ಮುರ್ಡೇಶ್ವರ ಆರ್‍ಎನ್‍ಎಸ್ ವಿದ್ಯಾನಿಕೇತನದಲ್ಲಿ ಸೌರವ್ಯೂಹ ಹಾಗೂ ಬಾಹ್ಯಾಕಾಶ ವಿಜ್ಷಾನದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಈಚೆಗೆ ನಡೆಯಿತು.

ಇಸ್ರೋದಲ್ಲಿ ಬಾಹ್ಯಾಕಾಶ ವಿಜ್ಷಾನಿಯಾಗಿ 40 ವರ್ಷ ಸೇವೆ ಸಲ್ಲಿಸಿದ್ದ ಹಿರಿಯ ವಿಜ್ಞಾನಿ ಪ್ರಭಾಕರ ಜೆ.ಭಟ್ ಉಪನ್ಯಾಸ ನೀಡಿ,ಸೌರವ್ಯೂಹ ಸದಸ್ಯ ಗ್ರಹಗಳ ಬಗ್ಗೆ ವಿವರವಾದ ಮಾಹಿತಿ ನೀಡಿ,ವಿದ್ಯಾರ್ಥಿಗಳು ಭವಿಷ್ಯದಲ್ಲಿ ಬಾಹ್ಯಾಕಾಶದ ವಿಷಯವನ್ನು ಅಧ್ಯಯನ ಮುಂದುವರಿಸಿ ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರುವಂತೆ ಹೇಳಿದರು.

ನಂತರ ವಿದ್ಯಾರ್ಥಿಗಳೊಂದಿಗೆ ನಡೆದ ಚರ್ಚೆಯಲ್ಲಿ ಅವರು ಕೇಳಿದ ಪ್ರಶ್ನೆ,ಸಂದೇಹಗಳಿಗೆ ಉತ್ತರಿಸಿದರು.ಆರ್‍ಎನ್‍ಎಸ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಎಂ.ವಿ ಹೆಗಡೆ,ಪ್ರಾಂಶುಪಾಲ ಸುರೇಶ ಶೆಟ್ಟಿ ಉಪಸ್ಥಿತರಿದ್ದರು.ಶಿಕ್ಷಕಿ ಪ್ಲಾವಿಯಾ ಸ್ವಾಗತಿಸಿ,ನಿರೂಪಿಸಿದರು.ಗೀತಾಕಿಣಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News