ಮಿಥಾಲಿ 6ನೆ ಶತಕ; ಭಾರತ 265/7
Update: 2017-07-15 19:13 IST
ಡರ್ಬಿ, ಜು.15: ನ್ಯೂಝಿಲೆಂಡ್ ವಿರುದ್ಧದ ಮಹಿಳೆಯರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತದ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಶತಕ ದಾಖಲಿಸಿದ್ದಾರೆ.
ಮಿಥಾಲಿ ರಾಜ್ ಶತಕ , ಹರ್ಮನ್‌ಪ್ರೀತ್ ಕೌರ್ , ವೇದಾ ಕೃಷ್ಣ ಮೂರ್ತಿ ಅರ್ಧಶತಕಗಳ ನೆರವಿನಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 265 ರನ್ ಗಳಿಸಿದೆ.
ಮಿಥಾಲಿ ರಾಜ್ 184ನೆ ಏಕದಿನ ಪಂದ್ಯದಲ್ಲಿ 116 ಎಸೆತಗಳನ್ನು ಎದುರಿಸಿ 10 ಬೌಂಡರಿಗಳ ಸಹಾಯದಿಂದ ಏಕದಿನ ಕ್ರಿಕೆಟ್ ನಲ್ಲಿ ಆರನೆ ಶತಕ ಪೂರ್ಣಗೊಳಿಸಿದರು.
ಮಿಥಾಲಿ ರಾಜ್ 109 ರನ್(123ಎ, 11ಬೌ), ವೇದಾ ಕೃಷ್ಣಮೂರ್ತಿ 70ರನ್(45ಎ, 7ಬೌ,2ಸಿ) ,ಎಚ್.ಕೌರ್ 60 ರನ್(90ಎ, 7ಬೌ), ಎಸ್.ಮಂಧಾನ 13ರನ್, ಪೂನಮ್ ರಾವತ್ 4 ರನ್ ಗಳಿಸಿದರು.