ಜುಲೈ 17ರಿಂದ ಆಳ್ವಾಸ್‍ನಲ್ಲಿ ಪ್ರಾಧ್ಯಾಪಕರಿಗೆ ಕಾರ್ಯಾಗಾರ

Update: 2017-07-15 13:56 GMT

ಮೂಡುಬಿದಿರೆ,ಜು.15: ಭಾರತ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ನೆರವಿನೊಂದಿಗೆ ಭಾರತೀಯ ಉದ್ಯಮಶೀಲತೆ ಸಂಸ್ಥೆಯ ವತಿಯಿಂದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜುಲೈ 17ರಿಂದ 28ರವರೆಗೆ ಉದ್ಯಮಶೀಲತಾ ವಿಕಸನ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಪ್ರಾಧ್ಯಾಪಕರಿಗಾಗಿ ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬಗ್ಗೆ ಆಸಕ್ತಿ ಮೂಡಿಸುವ ಕ್ರಮ, ಉದ್ಯಮ ಅವಕಾಶಗಳನ್ನು ಗುರುತಿಸಿಕೊಳ್ಳುವುದು, ಸ್ವಂತ ಉದ್ಯಮ ಪ್ರಾರಂಭಿಸುವ ವಿಧಾನ, ಉದ್ಯಮಶೀಲತೆಗೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳು ಮಾರುಕಟ್ಟೆ ಸಮೀಕ್ಷೆ ಮತ್ತು ಯೋಜನಾ ವರದಿ ಬಗ್ಗೆ ಮಾಹಿತಿ, ಕಾಲೇಜಿನ ಇ.ಡಿ ಸೆಲ್‍ಗಳಿಗೆ ಉದ್ಯಮಶೀಲತೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ದೊರೆಯುವ ಸಹಾಯ ಬಗ್ಗೆ ಮಾಹಿತಿ ಸಹಿತ ವಿವಿಧ ವಿಚಾರಗಳ ಬಗ್ಗೆ ಕಾರ್ಯಾಗಾರದಲ್ಲಿ ಮಂಥನ ನಡೆಯಲಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಇಂಜಿನಿಯರಿಂಗ್ ಕಾಲೇಜಿನ ಯೋಜನಾ ವಿಭಾಗದ ಡೀನ್ ಡಾ.ಧತ್ತಾತ್ರೇಯ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News