ತನಿಖೆಗೆ ಹಾಜರಾಗುವಂತೆ ವಜ್ರದೇಹಿ ಮಠದ ಸ್ವಾಮೀಜಿಗೆ ನೋಟಿಸ್
Update: 2017-07-15 19:34 IST
ಮಂಗಳೂರು, ಜು.15: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಬಳಿ "ಸ್ಫೋಟಕ ಮಾಹಿತಿ ಇದೆ" ಎಂದಿದ್ದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರಿಗೆ ಬಂಟ್ವಾಳ ಠಾಣಾ ಪೊಲೀಸರು ನೋಟಿಸ್ ನೀಡಿದ್ದಾರೆ.
ನಿನ್ನೆ ಶರತ್ ಹತ್ಯೆ ಪ್ರಕರಣದ ಕುರಿತಾಗಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸ್ವಾಮೀಜಿ, ಶರತ್ ಸಾವಿನ ಬಗ್ಗೆ ನನ್ನಲ್ಲಿ ಸ್ಫೋಟಕ ಮಾಹಿತಿ ಇದ್ದು, ಅದನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಹಾಜರಾಗುವಂತೆ ಬಂಟ್ವಾಳ ಠಾಣಾ ಪೊಲೀಸರು ಸ್ವಾಮೀಜಿಗೆ ನೋಟಿಸ್ ನೀಡಿದ್ದಾರೆ.