ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ತರಬೇತಿ
ಉಡುಪಿ, ಜು.15: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ವತಿಯಿಂದ ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿಯ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ ಯುವತಿಯರಿಗೆ ಬೆಂಗಳೂರು ಮತ್ತು ಮೈಸೂರು ಮಹಾನಗರಗಳಲ್ಲಿರುವ ಪ್ರತಿಷ್ಠಿತ ತರಬೇತಿ ಸಂಸ್ಥೆಗಳ ಮೂಲಕ ತಾಂತ್ರಿಕ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು.
ಸಂಸ್ಥೆಗಳ ಸಹಕಾರದೊಂದಿಗೆ ತಾಂತ್ರಿಕ ತರಬೇತಿಗಳನ್ನು ನೀಡಲು ಉದ್ದೇಶಿಸಿದ್ದು, ಹೆಚ್ಚಿನ ಮಾಹಿತಿಗೆ ಡಾ.ಬಿ.ಅರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ನಿಯಮಿತ ಉಡುಪಿ ಜಿಲ್ಲೆ, ಬಿ ಬ್ಲಾಕ್, ಕೊಠಡಿ ಸಂಖ್ಯೆ 302, 2ನೇ ಮಹಡಿ,ಜಿಲ್ಲಾಡಳಿತ ಕಛೇರಿ ಸಂಕೀರ್ಣ, ರಜತಾದ್ರಿ ಮಣಿಪಾಲ - 576104. ಹೆಚ್ಚಿನ ಮಾಹಿತಿಗೆ ದೂರವಾಣಿ: 0820-2574884ನ್ನು ಸಂಪರ್ಕಿಸಬಹುದು.
ಅಭ್ಯರ್ಥಿಗಳು ಬಿಳಿ ಹಾಳೆಯಲ್ಲಿ ಹೆಸರು, ವಿಳಾಸ, ಜಾತಿ, ಹುಟ್ಟಿದ ದಿನ, ಮೊಬೈಲ್ ಸಂಖ್ಯೆ ಮತ್ತು ಆಪೇಕ್ಷಿಸುವ ತರಬೇತಿಯ ಹೆಸರನ್ನು ಬರೆದು ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಬಿ-302, ರಜತಾದ್ರಿ ಮಣಿಪಾಲ-576104 ಇವರಿಗೆ ಜು.31ರೊಳಗೆ ಅಂಚೆ/ ಮುದ್ದಾಂ/dmudupi@yahoo.comಗೆ ಇ-ಮೈಲ್ ಮೂಲಕ ಕಳುಹಿಸಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.