×
Ad

ಪ್ರವಾಸೋದ್ಯಮ ಅಭಿವೃದ್ಧಿಗೆ ವೆಬ್‌ಸೈಟ್ ಅಪಡೇಟ್

Update: 2017-07-15 21:08 IST

ಉಡುಪಿ, ಜು.15: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮಾಹಿತಿ, ಛಾಯಾಚಿತ್ರಗಳನ್ನು ನವೀಕರಿಸಲು (ಅಪಡೇಟ್) ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ. ಈ ವೆಬ್‌ಸೈಟ್‌ನ ಬಿಡುಗಡೆ ಮೊದಲೇ ಸಮಿತಿಯ ಸದಸ್ಯರು ವೀಕ್ಷಿಸಿ ತಮ್ಮ ಅಭಿಪ್ರಾಯ ತಿಳಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

 ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಜಿಲ್ಲೆಯ ಹೊಸ ಸೇರ್ಪಡೆಗಳು, ಹಬ್ಬಗಳ ಮಾಹಿತಿ, ಪ್ರವಾಸಿ ಸ್ಥಳಗಳ ಮಾಹಿತಿಯನ್ನೊಳಗೊಂಡ ಸಮಗ್ರ ವೆಬ್‌ಸೈಟ್ ಇಂದಿನ ಅಗತ್ಯ ಎಂದರು.ಇದರಜೊತೆಗೆ ಹೊಟೇಲ್ ಅಸೋಸಿಯೇಶನ್‌ಪ್ರಚಾರಕ್ಕೆ ನೀಡಲೊಪ್ಪಿಸಿರುವ ಹೋರ್ಡಿಂಗ್‌ಗಳ ವಿನ್ಯಾಸವನ್ನು ಅಂತಿಮಪಡಿಸಲು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಕಾಪುನಲ್ಲಿ ಸ್ಕೂಬಾ ಡೈವಿಂಗ್: ಕಾಪು ಕಡಲ ತೀರದಲ್ಲಿ ಸ್ಕೂಬಾ ಡೈವಿಂಗ್ ಸಾಹಸ ಕ್ರೀಡೆ ನಡೆಸಲು ಸ್ಥಳ ಪರಿಶೀಲನೆ ನಡೆಸಿ ಸೂಕ್ತವೆಂದು ತಿಳಿದು ಬಂದಿದ್ದು, ಅದನ್ನು ಅಭಿವೃದ್ಧಿ ಪಡಿಸುವ ಸಂಬಂಧ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಪ್ ಅಡ್ವೆಂಚರ್‌ನ ಸಲಹಗಾರರಾದ ಕೀರ್ತಿ ಪಾಯಸ್‌ರ ಅಭಿಪ್ರಾಯ ಪಡೆಯಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಬಳಿಕ ಮಣ್ಣಪಳ್ಳ ಅಭಿವೃದ್ಧಿ ಬಗ್ಗೆಯೂ ನಡೆದ ಸಭೆಯಲ್ಲಿ ಕೆರೆ ನಿರ್ವಹಣೆ, ಸಮಿತಿ ಹಣಕಾಸಿನ ಸ್ಥಿತಿ ಬಗ್ಗೆ, ಅಭಿವೃದ್ದಿಗೆ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರ ಮತ್ತು ನಗರಸಭೆಯಿಂದ ನೆರವು ಪಡೆಯಲು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು. ಮಣ್ಣಪಳ್ಳವನ್ನು ಜನಾಕರ್ಷಣೆಗೊಳಿಸಲು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾ ಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ ಸೇರಿದಂತೆ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News