×
Ad

ದಿಲ್ಲಿ ಅಲ್ಪಸಂಖ್ಯಾತ ಆಯೋಗ ಪುನರ್ರಚನೆ

Update: 2017-07-15 21:37 IST

ಹೊಸದಿಲ್ಲಿ, ಜು.15: ಮೂವರು ಸದಸ್ಯರ ದಿಲ್ಲಿ ಅಲ್ಪಸಂಖ್ಯಾತ ಆಯೋಗವನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಪುನರ್‌ರಚಿಸಿದ್ದು ಖ್ಯಾತ ವಿದ್ವಾಂಸ ಮತ್ತು ಪತ್ರಕರ್ತ ಝಫರುಲ್ ಇಸ್ಲಾಂಖಾನ್ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ.

  ಅನಸ್ಟೆಷಿಯ ಗಿಲ್ ಮತ್ತು ಕರ್ತಾರ್ ಸಿಂಗ್ ಕೊಚ್ಚಾರ್ ಆಯೋಗದ ಸದಸ್ಯರಾಗಿದ್ದಾರೆ. ಆಯೋಗದ ಮೂವರು ಸದಸ್ಯರ ಹೆಸರನ್ನು ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯ ಸೂಚಿಸಿದರು. ಆಯೋಗದ ಕಾರ್ಯಾವಧಿ ಮೂರು ವರ್ಷವಾಗಿದ್ದು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಜಾಲ್ ಈ ನೇಮಕಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News