×
Ad

ಸರಳಜೀವನ ಫೋಟೋಗ್ರಫಿಯಲ್ಲಿ ಅಪುಲ್ ಇರಾ ಪ್ರಥಮ

Update: 2017-07-16 17:07 IST

ಮಂಗಳೂರು, ಜು.16: ಸರಳ ಜೀವನ ಟಿವಿ ವಾಹಿನಿ ಆಯೋಜಿಸಿದ ಸರಳಜೀವನ ಫೋಟೋಗ್ರಫಿ ಅವಾರ್ಡ್ 2017 ರಾಷ್ಟ್ರಮಟ್ಟದ ಫೋಟೋಗ್ರಫಿ ಸ್ಪರ್ಧೆಯ ‘ಫೋಟೋ ಟ್ರಾವೆಲ್’ ವಿಭಾಗದಲ್ಲಿ ವಿಜಯವಾಣಿ ಛಾಯಾಗ್ರಾಹಕ ಅಪುಲ್ ಇರಾ ಅವರ ‘ಸಾತೊಡ್ಡಿ ಸೌಂದರ್ಯ’ ಶೀರ್ಷಿಕೆಯ ಚಿತ್ರ ಪ್ರಥಮ ಸ್ಥಾನ ಪಡೆದಿದೆ.

ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಲಾದ ಸರಳ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಿತು. ಈ ವೇಳೆ ಛಾಯಾ ಚಿತ್ರಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ನಟಿ ಶರ್ಮಿಳಾ ಮಾಂಡ್ರೆ ಬಹುಮಾನ ವಿತರಿಸಿದರು. ಸರಳಜೀವನ ವಾಹಿನಿ ಮುಖ್ಯಸ್ಥ ರಘುನಾಥ ರೆಡ್ಡಿ, ನಿರೂಪಕಿ ರಕ್ಷಾ ಸಮತ ಹಾಗೂ ಛಾಯಾಗ್ರಾಹಕರಾದ ಶಿವು ಕೆ., ವಿ.ಡಿ.ಭಟ್ ಸುಗಾವಿ, ಇಂದ್ರಕುಮಾರ್ ದಸ್ತೆಣ್ಣವರ್, ಮಂಗಳೂರಿನ ಪುನೀಕ್ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 1200 ಛಾಯಾಚಿತ್ರಗಳು ಸ್ಪರ್ಧೆಯಲ್ಲಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News