ಚೀನಾ: ಬೆಂಕಿಗಾಹುತಿಯಾದ ಮನೆ; 22 ಸಾವು
Update: 2017-07-16 19:21 IST
ಬೀಜಿಂಗ್, ಜು. 16: ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತದ ಚಂಗ್ಶು ನಗರದ ಎರಡು ಮಹಡಿ ಮನೆಯೊಂದರಲ್ಲಿ ರವಿವಾರ ಮುಂಜಾನೆ ಸಂಭವಿಸಿದ ಬೆಂಕಿ ದುರಂತದಲ್ಲಿ 22 ಮಂದಿ ಮೃತಪಟ್ಟಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ.
ರವಿವಾರ ಮುಂಜಾನೆ 4:30ಕ್ಕೆ ಬೆಂಕಿ ಹೊತ್ತಿಕೊಂಡಿತು ಎಂದು ನಗರಾಡಳಿತವು ಸಾಮಾಜಿಕ ಮಾಧ್ಯಮವೊಂದರಲ್ಲಿ ಹಾಕಿದ ಸಂದೇಶದಲ್ಲಿ ತಿಳಿಸಿದೆ.ಅಧಿಕಾರಿಗಳು ಬೆಂಕಿ ನಂದಿಸಿದ್ದಾರೆ ಹಾಗೂ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಅದು ಹೇಳಿದೆ.ಎಷ್ಟು ಮಂದಿ ನಿವಾಸಿಗಳು ಬದುಕುಳಿದಿದ್ದಾರೆ ಎನ್ನುವುದು ಗೊತ್ತಾಗಿಲ್ಲ.
ಆ ಮನೆಯಲ್ಲಿ 20ಕ್ಕಿಂತಲೂ ಅಧಿಕ ಮಂದಿ ವಾಸಿಸುತ್ತಿದ್ದರು ಎಂಬುದಾಗಿ ಇದಕ್ಕೂ ಮೊದಲು ಅಧಿಕೃತ ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿತ್ತು.