×
Ad

ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷರಿಗೆ ತಂಡದಿಂದ ಹಲ್ಲೆ

Update: 2017-07-16 19:53 IST

ಕಡಬ, ಜು.16. ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಭಟ್ ಕಲ್ಪುರೆಗೆ ತಂಡವೊಂದು ಕಬ್ಬಿಣದ ರಾಡ್ ನಿಂದ ಗಂಭೀರ ಹಲ್ಲೆ ನಡೆಸಿದ್ದು, ಕಡಬದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ‌.

ಕೃಷಿಕರಾಗಿದ್ದುಕೊಂಡು ಸಾಮಾಜಿಕ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದ ರಮೇಶ್ ಭಟ್ ಕಡಬದ ಯಶೋದಾ ಸೂಪರ್ ಮಾರ್ಕೆಟ್ ಗೆ ತೆರಳಿ ಸಾಮಾಗ್ರಿ ಖರೀದಿಸಿ ತನ್ನ ಜೀಪಿನ ಹತ್ತಿರ ಆಗಮಿಸಿದ ಸಂದರ್ಭದಲ್ಲಿ ಏಕಾಏಕಿ ಮುಗಿಬಿದ್ದ ಆಕ್ರಮಣಕಾರರು ಯದ್ವಾತದ್ವಾ ಹಲ್ಲೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದು, ಕಡಬ ಠಾಣೆಗೆ ಸಾರ್ವಜನಿಕರು ಜಮಾವಣೆಗೊಂಡಿದ್ದಾರೆ.                       

ಸ್ಥಳಕ್ಕೆ ಉಪ್ಪಿನಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅನಿಲ್ ಕುಲಕರ್ಣಿ ಆಗಮಿಸಿ ಸಾರ್ವಜನಿಕರನ್ನು ಚದುರಿಸಿದರು‌.

ಘಟನೆಯ ಹಿನ್ನೆಲೆಯಲ್ಲಿ ಸೋಮವಾರದಂದು ಕಡಬ ಬಂದ್ ಗೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಯ ಪ್ರಮುಖರು ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News