×
Ad

ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಮ್ಮ ನಾಯಕನನ್ನು ಬಿಡುಗಡೆಗೊಳಿಸಿದ ಬಜರಂಗದಳ ಕಾರ್ಯಕರ್ತರು!

Update: 2017-07-16 20:27 IST

ಭೋಪಾಲ್, ಜು.16: ಪೊಲೀಸ್ ಠಾಣೆಯೊಂದಕ್ಕೆ ಮುತ್ತಿಗೆ ಹಾಕಿದ ಬಜರಂಗದಳದ ಕಾರ್ಯಕರ್ತರು ಸಾರ್ವಜನಿಕ ಪ್ರದೇಶದಲ್ಲಿ ಮದ್ಯಪಾನ ಮಾಡಿ ಬಂಧನಕ್ಕೊಳಗಾಗಿದ್ದ ಬಜರಂಗದಳದ ನಾಯಕನನ್ನು ಬಿಡಿಸಿಕೊಂಡು ಹೋದ ಘಟನೆ ಭೋಪಾಲದಲ್ಲಿ ನಡೆದಿದೆ.

ಸುಮಾರು 50ಕ್ಕೂ ಅಧಿಕ ಬಜರಂಗದಳದ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಇದರಿಂದ ನಾವು ಬಜರಂಗದಳದ ನಾಯಕ ಕಮಲೇಶ್ ಠಾಕೂರ್ ನನ್ನು ಬಿಡುಗಡೆಗೊಳಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಇದರ ನಂತರ ಪೊಲೀಸ್ ಠಾಣೆಯಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಠಾಕೂರ್, ತಾನು ಅಮಾಯಕ. ನಾನು ಶಾಪಿಂಗ್ ಗಾಗಿ ಇಲ್ಲಿಗೆ ಬಂದಿದ್ದೆ ಎಂದು ಪೊಲೀಸರಲ್ಲಿ ಹೇಳಿದ್ದೆ. ಆದರೆ ಅವರು ನನ್ನನ್ನು ತಡೆದು ನಿಲ್ಲಿಸಿದರು. ಈ ಬಗ್ಗೆ ನಾನು ಮಾತನಾಡಿದ್ದಕ್ಕಾಗಿ ನನ್ನನ್ನು ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿದರು” ಎಂದು ಹೇಳಿದ್ದಾನೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಗಳು, ಠಾಕೂರ್ ಸ್ಥಳೀಯ ಮಾರುಕಟ್ಟೆಯೊಂದರ ಸಮೀಪ ಮದ್ಯಪಾನ ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ ಪೊಲೀಸರನ್ನು ನಿಂದಿಸಿದ್ದಲ್ಲದೆ, ತಳ್ಳಿದ್ದಾನೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News