ಹೊಳೆಗೆ ಬಿದ್ದು ಮೃತ್ಯು
Update: 2017-07-16 20:48 IST
ಬ್ರಹ್ಮಾವರ, ಜು.16: ಹೊಳೆಯಲ್ಲಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಕಸ್ಮಿಕವಾಗಿ ನೀರಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಜು.15ರಂದು ಸಂಜೆ ವೇಳೆ ಬಾರಕೂರು ಹೊಸಾಳ ಶಾಲೆಯ ಬಳಿ ನಡೆದಿದೆ.
ಮೃತರನ್ನು ನಾಗೇಂದ್ರ(24) ಎಂದು ಗುರುತಿಸಲಾಗಿದೆ. ಇವರು ಮೀನು ಗಾರಿಕೆ ದೋಣಿಯಲ್ಲಿ ಜಲ್ಲು ಹಾಕುತ್ತಿರುವಾಗ ಅಕಸ್ಮಿಕವಾಗಿ ಜಲ್ಲು ತುಂಡಾಗಿ ಅಯಾ ತಪ್ಪಿಹೊಳೆ ನೀರಿಗೆ ಬಿದ್ದು, ಸರಿಯಾಗಿ ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.