×
Ad

ತೊಕ್ಕೊಟ್ಟು : ಯೋಗಾಸನ ತರಬೇತಿ ಕೇಂದ್ರಕ್ಕೆ ಚಾಲನೆ

Update: 2017-07-16 21:56 IST

ಉಳ್ಳಾಲ,ಜು.16: ಆಸನಗಳಿಂದ  ಜೀವನಕ್ರಮ ಸರಳವಾಗಲು ಸಾಧ್ಯ  ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನದ ಪ್ರಾಧ್ಯಾಪಕರಾದ ಡಾ.ಅಜಿತೇಶ್ ಎನ್.ಹೆಚ್ ಅಭಿಪ್ರಾಯಪಟ್ಟರು.

ಅವರು ತೊಕ್ಕೊಟ್ಟು ಒಳಪೇಟೆಯ ಆಮಂತ್ರಣ ಸಭಾಂಗಣದಲ್ಲಿ ಭಾನುವಾರ ಆರೋಗ್ಯ ಯೋಗ ಕೇಂದ್ರದ ವತಿಯಿಂದ  ಆರಂಭಗೊಂಡ ಯೋಗಾಸನ  ತರಬೇತಿ ಕೇಂದ್ರವನ್ನು  ಉದ್ಘಾಟಿಸಿ ಮಾತನಾಡಿದರು.

ದಿನ ಸೇವಿಸುವ  ತಿಂಡಿ, ತಿನಿಸುಗಳಿಂದ,  ಜೀವನಕ್ರಮದಿಂದಾಗಿ ಆರೋಗ್ಯ ಕ್ರಮಗಳು ಹಾಳಾಗುತ್ತಿವೆ. ರಕ್ತದೊತ್ತಡ , ಮಧುಮೇಹ ಕಾಯಿಲೆಗಳು  ಹೆಚ್ಚಾಗುತ್ತಿದ್ದು, ಜನ ಆರೋಗ್ಯವನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಇಂತಹ ಸಂದರ್ಭ  ತೊಕ್ಕೊಟ್ಟು ಸುತ್ತಮುತ್ತಲ  ಜನರ ಆರೋಗ್ಯಕ್ಕೆ  ಅನುಕೂಲವಾಗುವ ರೀತಿಯಲ್ಲಿ  ಹಾಗೂ ಉತ್ತಮ ಆರೋಗ್ಯವನ್ನು  ಪಡೆಯಬೇಕು ಅನ್ನುವ ದೃಷ್ಟಿಯಿಂದ ಆರೋಗ್ಯ ಯೋಗ್ಯ ಕೇಂದ್ರದ ಮೂಲಕ ಯೋಗ ತರಬೇತಿ ಕೇಂದ್ರದ ಸ್ಥಾಪನೆ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ.ಸುವರ್ಣ ಮಾತನಾಡಿ  ಯೋಗಗುರು ಯುವತಿ ಶ್ರಮದಿಂದ  ತರಬೇತಿ ಕೇಂದ್ರದ ಉದ್ಘಾಟನೆಯಾಗಿದೆ.  ಯೋಗವಿಲ್ಲದ ಜೀವನಕ್ರಮ ಹಿಂದಿನ ಕಾಲದಲ್ಲಿ ಇರಲಿಲ್ಲ.  ಇದೀಗ ಪ್ರಧಾನಿ ಮೋದಿಯವರು  ಖುದ್ದು ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದಿನದ 18 ಗಂಟೆಯ ಕಾಲ ಉಲ್ಲಾಸದಿಂದಲೇ ದೇಶದ ಪ್ರಗತಿಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರನ್ನೇ ಮಾದರಿಯಾಗಿ ಪಡೆದುಕೊಂಡು ಎಲ್ಲರೂ ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಿಸಬೇಕಿದೆ ಎಂದರು.

ಈ ಸಂದರ್ಭ  ರೈಲ್ವೇ ಸಲಹಾ  ಮಂಡಳಿ ಸದಸ್ಯರು ಹಾಗೂ ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದ  ಆಡಳಿತ ಮೊಕ್ತೇಸರರಾದ ಚಂದ್ರಹಾಸ್ ಅಡ್ಯಂತಾಯ,  ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಪೊಸಕುರಲ್  ಸುದ್ಧಿವಾಹಿನಿ ಆಡಳಿತ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಯೋಗಗುರು ಪೂರ್ವಶ್ರೀ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಳ್ಳಾಲ ಪುರಸಭೆ ಮಾಜಿ ಸದಸ್ಯ ಭಗವಾನ್‍ದಾಸ್  ಸ್ವಾಗತಿಸಿದರು.    ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News