×
Ad

ಭಟ್ಕಳ: ಎಚ್1 ಎನ್1 ಗೆ ಮಹಿಳೆ ಬಲಿ

Update: 2017-07-16 22:00 IST

ಭಟ್ಕಳ,ಜು.16: ಎಚ್1.ಎನ್1 ಮಹಾಮಾರಿ ಭಟ್ಕಳದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದು ಭಾನುವಾರ ಮಾವಿನಕುರ್ವೆ ಪಂಚಾಯತ್ ವ್ಯಾಪ್ತಿಯ ಓರ್ವ ಮಹಿಳೆ ಇದಕ್ಕೆ ಬಲಿಯಾಗಿದ್ದಾರೆ.

ಎಚ್1 ಎನ್1 ರೋಗಕ್ಕೆ ತುತ್ತಾದ ಮಹಿಳೆಯನ್ನು ನಾಗರತ್ನ ಶನಿಯಾರ್ ಮೊಗೇರ್(45) ಎಂದು ಗುರುತಿಸಲಾಗಿದೆ. ಇವರು ಕಳೆದ ನಾಲ್ಕು ದಿನಗಳಿಂದ ಜ್ವರ ಹಾಗೂ ಶೀತದಿಂದ ನರಳುತ್ತಿದ್ದು ಸ್ಥಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅಲ್ಲಿನ ವೈದ್ಯರು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರು ಎನ್ನಲಾಗಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಎರಡು ತಿಂಗಳ ಹಿಂದೆಯೂ ಎರಡು ವರ್ಷದ ಮಗು ಈ ಸೊಂಕಿಗೆ ತುತ್ತಾಗಿ ಸಾವನ್ನಿಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News