×
Ad

ಶರೀಫ್ ವಿರುದ್ಧದ 15 ಪ್ರಕರಣ ತೆರೆಯಲು ಜೆಐಟಿ ಶಿಫಾರಸು

Update: 2017-07-16 22:31 IST

ಇಸ್ಲಾಮಾಬಾದ್, ಜು. 16: ಪಾಕಿಸ್ತಾನ ಪ್ರಧಾನಿ ನವಾಝ್ ಶರೀಫ್ ಕುಟುಂಬದ ಆಸ್ತಿ ಬಗ್ಗೆ ತನಿಖೆ ನಡೆಸಿರುವ ಜಂಟಿ ತನಿಖಾ ತಂಡ (ಜೆಐಟಿ)ವು, ಪಾಕ್ ಪ್ರಧಾನಿ ವಿರುದ್ಧದ 15 ಪ್ರಕರಣಗಳನ್ನು ಮತ್ತೆ ತೆರೆಯುವಂತೆ ಶಿಫಾರಸು ಮಾಡಿದೆ ಎಂದು ಮಾಧ್ಯಮಗಳು ರವಿವಾರ ವರದಿ ಮಾಡಿವೆ.

ಈ 15 ಪ್ರಕರಣಗಳ ಪೈಕಿ, ಮೂರು ಪ್ರಕರಣಗಳು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಸರಕಾರಗಳು ಅಸ್ತಿತ್ವದಲ್ಲಿದ್ದ 1994 ಮತ್ತು 2011ರಲ್ಲಿ ಮತ್ತು 12 ಪ್ರಕರಣಗಳು ಅಧ್ಯಕ್ಷ ಪರ್ವೇಝ್ ಮುಶರ್ರಫ್ ಆಡಳಿತಾವಧಿಯಲ್ಲಿ ದಾಖಲಾಗಿವೆ.

1999ರ ಸೇನಾ ಕ್ಷಿಪ್ರಕ್ರಾಂತಿಯಲ್ಲಿ ನವಾಝ್ ಶರೀಫ್ ಸರಕಾರವನ್ನು ಉರುಳಿಸಿ ಸೇನಾ ಮುಖ್ಯಸ್ಥ ಜನರಲ್ ಪರ್ವೇಝ್ ಮುಶರ್ರಫ್ ಅಧಿಕಾರಕ್ಕೆ ಬಂದರು.

ಸರಿಯಾದ ತನಿಖೆ ನಡೆಸದೆ ಹಾಗೂ ಪುರಾವೆಗಳು ದಾಖಲಾಗಲು ಅವಕಾಶವನ್ನೇ ನೀಡದೆ ಈ 15 ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ ಎಂದು ಜೆ ಐಟಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News