×
Ad

ಮಂಗಳೂರು : ವಿಚಾರಣಾಧೀನ ಕೈದಿ ಆಸ್ಪತ್ರೆಯಲ್ಲಿ ಸಾವು

Update: 2017-07-16 22:49 IST

ಮಂಗಳೂರು, ಜು. 16: ಜೈಲ್‌ನಲ್ಲಿದ್ದ ವಿಚಾರಣಾಧೀನ ಕೈದಿಯೋರ್ವ ಅಸೌಖ್ಯದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.

ಕಾಸರಗೋಡು ನಿವಾಸಿ ಉದಯ ಕುಮಾರ್ ರೈ (32) ಮೃತಪಟ್ಟ ಕೈದಿ. ಮಾನಸಿಕ ರೋಗಿಯಾಗಿದ್ದ ಈತನಿಗೆ ಮಧ್ಯಾಹ್ನದ ವೇಳೆಗೆ ತೀವ್ರ ಅಸೌಖ್ಯ ಕಾಣಿಸಿಕೊಂಡಿತ್ತು. ಜೈಲ್ ಸಿಬಂದಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದ್ದಾರೆ. ಆದರೆ, ಸಂಜೆ 6:50 ರ ಹೊತ್ತಿಗೆ ಆತ ಚಿಕಿತ್ಸೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಐದು ಕಿ.ಗ್ರಾಂ ಗಾಂಜಾ ಸಾಗಾಟ ಆರೋಪದಲ್ಲಿ ಉರ್ವ ಪೊಲೀಸರಿಂದ ಬಂಧಿತನಾಗಿದ್ದ ಈತನನ್ನು ಹಳೇ ಜೈಲ್‌ನಲ್ಲಿ ಇಡಲಾಗಿತ್ತು.

ಕೊಲೆ ಶಂಕೆ ?: ಮಾನಸಿಕ ಖಿನ್ನತೆಗೊಳಗಾದ ಆರೋಪಿ ಉದಯ ಕುಮಾರ್‌ನನ್ನು ಆಗಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು ಎನ್ನಲಾಗಿದೆ.

ಸುಮಾರು 10 ದಿನಗಳ ಹಿಂದೆ ಸಹಕೈದಿಗಳು ಈತನ ಮೇಲೆ ಹಲ್ಲೆ ಮಾಡಿದ್ದರು. ಗಂಭೀರ ಗಾಯಗೊಂಡಿದ್ದ ಈತನನ್ನು ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News