×
Ad

ಬೈಕ್ ಸ್ಕಿಡ್ : ಸವಾರ ಗಂಭೀರ

Update: 2017-07-16 23:30 IST

ಕಡಬ, ಜು.16. ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಬೈಕೊಂದು ಸ್ಕಿಡ್ ಆದ ಪರಿಣಾಮ ಬೈಕ್ ಸವಾರ ಮರ್ಧಾಳದ ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.

ಗಾಯಾಳು ಯುವಕನನ್ನು ಮರ್ಧಾಳ ಸಮೀಪದ ಬೆತ್ತೋಡಿ ನಿವಾಸಿ ಮಧುಸೂದನ ಎಂಬವರ ಪುತ್ರ ನಿಶಾಂತ್(28) ಎಂದು ಗುರುತಿಸಲಾಗಿದೆ. ನಿಶಾಂತ್ ಮೂಡಬಿದಿರೆಯಿಂದ ನೆಲ್ಯಾಡಿ ಮೂಲಕ ಮರ್ಧಾಳಕ್ಕೆ ಬೈಕಿನಲ್ಲಿ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ತಲೆಗೆ ಗಾಯಗಳಾಗಿದ್ದು, ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಮಂಗಳಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ನೆಲ್ಯಾಡಿ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News