ಉಳ್ಳಾಲದಲ್ಲಿ ಪಿ.ಎಫ್.ಐ.ಯಿಂದ ಈದ್ ಮಿಲನ್ ಸ್ಪೋಟ್ಸ್
Update: 2017-07-17 15:57 IST
ಉಳ್ಳಾಲ, ಜು.17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ.)ದ ಉಳ್ಳಾಲ ವಲಯದ ವತಿಯಿಂದ ಈದ್ ಮಿಲನ್ ಸ್ಪೋರ್ಟ್ಸ್ ರವಿವಾರ ಬೆಳಗ್ಗೆ ಮಲಾರ್ ಮೈದಾನದಲ್ಲಿ ನಡೆಯಿತು.
ಪಿ.ಎಫ್.ಐ. ದ.ಕ. ಜಿಲ್ಲಾ ಅಧ್ಯಕ್ಷ ನವಾಝ್ ಉಳ್ಳಾಲ ದ್ವಜಾರೊಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಂಝೀಲ್ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದದರು.
ಕಾರ್ಯಕ್ರಮದಲ್ಲಿ ಉಳ್ಳಾಲ ವಲಯಾಧ್ಯಕ್ಷ ಸಿದ್ದೀಕ್ ಉಳ್ಳಾಲ, ಕಾರ್ಯದರ್ಶಿ ಬಶೀರ್ ಎಸ್.ಎಂ. ಎಸ್.ಡಿ.ಪಿ.ಐ. ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯ ,ಸಿದ್ದೀಕ್ ಉಳ್ಳಾಲ , ಹಾರಿಸ್ ಮಲಾರ್ , ರವೂಫ್ ಉಳ್ಳಾಲ, ನಾಸಿರ್ ಮಲಾರ್, ಶರೀಫ್ ಕೊಣಾಜೆ,ಲತೀಫ್ ಕೋಡಿಜಾಲ್, ರಿಯಾಝ್ ಪನೀರ್ ಹಾಗೂ ಉಳ್ಳಾಲ, ದೇರಳಕಟ್ಟೆ, ಕೊಣಾಜೆ, ಮಲಾರ್ ನಲ್ಲಿರುವ ಪಿ.ಎಫ್.ಐ. ಕಾರ್ಯಕರ್ತರು ಭಾಗವಹಿಸಿದ್ದರು.
ಝಾಯಿದ್ ಮಲಾರ್ ಸ್ವಾಗತಿಸಿದರು. ಸಿದ್ದೀಕ್ ಕುಂಪಲ ವಂದಿಸಿದರು. ಹಾರಿಸ್ ಕಾರ್ಯಕ್ರಮ ನಿರೂಪಿಸಿದರು.