ಜು.18:ಕೃಷ್ಣಾಪುರದಲ್ಲಿ ಹಜ್ ತರಬೇತಿ ಶಿಬಿರ
Update: 2017-07-17 19:21 IST
ಮಂಗಳೂರು, ಜು.17: ಅಲ್ ಮದ್ರಸತುಲ್ ಬದ್ರಿಯಾ (ಕೇಂದ್ರ) ಮದ್ರಸ ಸಮಿತಿ ವತಿಯಿಂದ ಜು.18ರಂದು ಬೆಳಗ್ಗೆ 9:30ರಿಂದ ಸಂಜೆ 4ರವರೆಗೆ ಕೃಷ್ಣಾಪುರ 7ನೆ ಬ್ಲಾಕ್‌ನ ಬದ್ರಿಯಾ ಜುಮಾ ಮಸೀದಿಯಲ್ಲಿ ಹಜ್ ತರಬೇತಿ ಶಿಬಿರ ನಡೆಯಲಿದೆ.
ಕೃಷ್ಣಾಪುರ ಮುಸ್ಲಿಂ ಜಮಾಅತ್ ಖಾಝಿ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ಶಿಬಿರ ಉದ್ಘಾಟಿಸಲಿದ್ದು, ರಾಜ್ಯ ಸುನ್ನಿ ಜಂ ಇಯ್ಯತುಲ್ ಉಲಮಾದ ಉಪಾಧ್ಯಕ್ಷ ಹಾಜಿ ಯು.ಕೆ. ಮುಹಮ್ಮದ್ ಸಅದಿ ವಳವೂರು ಹಜ್ ತರಬೇತಿ ನೀಡಲಿದ್ದಾರೆ. ಸ್ತ್ರೀಯರು ನಮಾಝ್‌ನ ವಸ್ತ್ರಗಳನ್ನು ತಾವೇ ತರುವಂತೆ ಪ್ರಕಟನೆ ತಿಳಿಸಿದೆ.