×
Ad

ವಿದೇಶಿ, ದೇಶೀಯ ಪ್ರವಾಸಿಗರ ಅನುಕೂಲಕ್ಕಾಗಿ ಸಹಾಯವಾಣಿ

Update: 2017-07-17 19:28 IST

ಉಡುಪಿ, ಜು.17: ಭಾರತ ಪ್ರವಾಸೋದ್ಯಮ ಮಂತ್ರಾಲಯವು ಭಾರತಕ್ಕೆ ಭೇಟಿ ನೀಡುವ ವಿದೇಶಿ ಹಾಗೂ ದೇಶೀಯ ಪ್ರವಾಸಿಗರ ಅನುಕೂಲಕ್ಕಾಗಿ ವಾರದ 24 ಗಂಟೆಗಳ ಕಾಲ ಪ್ರವಾಸಿ ಮಾಹಿತಿಯನ್ನು ನೀಡುವ ಟೋಲ್ ಫ್ರೀ ಸಂಖ್ಯೆ:1800111363 ಅಥವಾ 1363 ಸಹಾಯವಾಣಿ ಮೂಲಕ ನೀಡಲಿದೆ.

12 ವಿವಿಧ ಅಂತಾರಾಷ್ಟ್ರೀಯ ಭಾಷೆಗಳಲ್ಲಿ, ಹಿಂದಿ ಮತ್ತು ಇಂಗ್ಲೀಷ್ ಒಳ ಗೊಂಡಂತೆ ಅರಬ್, ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನ್ ಕೊರಿಯನ್, ಚೀನಾ, ಪೋರ್ಚುಗೀಸ್, ರಶ್ಯನ್ ಮತ್ತು ಸ್ಪಾನಿಶ್ ಇತರೆ ಭಾಷೆಗಳಲ್ಲಿ ಪ್ರವಾಸಿ ಮಾಹಿತಿ ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News