ಎಸ್ಸೆಸ್ಸೆಫ್: ರಕ್ತ ಶೇಖರಣಾ ಅಭಿಯಾನಕ್ಕೆ ಚಾಲನೆ
ಉಳ್ಳಾಲ, ಜು.17: ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ 10 ಆಸ್ಪತ್ರೆಗಳಲ್ಲಿ ರಕ್ತ ಶೇಖರಣಾ ಅಭಿಯಾನದ ಪ್ರಯುಕ್ತ ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ವತಿಯಿಂದ ಕೆಎಂಸಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರಕ್ಕೆ ದೇರಳಕಟ್ಟೆಯಲ್ಲಿರುವ ತಾಜುಲ್ ಉಲಮಾ ಸುನ್ನಿ ಸೆಂಟರ್‌ನಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಅಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಎಸ್‌ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವಾ ಹಾಜಿ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್, ಎಸ್ಸೆಸ್ಸೆಫ್ ರಾಜ್ಯ ಮುಂಖಂಡ ಅಲ್ತಾಫ್ ಕುಂಪಲ, ಎಸ್ಸೆಸ್ಸೆಫ್ ಬ್ಲಡ್‌ಬ್ಯಾಂಕ್‌ನ ಕರೀಂ ಕದ್ಕಾರ್, ಯೂಸುಫ್ ರಝ್ವಿ ದೇರಳಕಟ್ಟೆ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು, ಕಾರ್ಯದರ್ಶಿ ಸೈಯದ್ ಖುಬೈಬ್ ತಂಙಳ್, ಸದಸ್ಯರಾದ ತೌಸೀಫ್ ಸಅದಿ ಹರೇಕಳ, ಹಮೀದ್ ನಾಟೆಕಲ್ ಉಪಸ್ಥಿತರಿದ್ದರು.
ಡಿವಿಜನ್ ಕಾರ್ಯದರ್ಶಿ ಸಫೀರ್ ರೆಂಜಾಡಿ ಸ್ವಾಗತಿಸಿದರು. ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ವಂದಿಸಿದರು.